ಮೇವಿನ ಬಿತ್ತನೆ ಬೀಜ ವಿತರಣೆ

17 Hanumasagara 1
ಡಾ.ಆನಂದ ದೇವರನಾವದಗಿ
Published on

ಹನುಮಸಾಗರ: ಜಾನುವಾರುಗಳಿಗೆ ಮೇವುನಿಗಿಸಲು ನೀರಾವರಿ ಸೌಲಭ್ಯ ಹೊಂದಿರುವ ಸಣ್ಣ, ಅತಿ ಸಣ್ಣ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಶು ಸಂಗೋಪನಾ ಇಲಾಖೆಯಿಂದ ಉಚಿತವಾಗಿ ಮೇವಿನ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇವಿನ ಜೋಳ, ಅಲಸಂದಿ ಬೀಜಗಳನ್ನು ವಿತರಿಸಲಾಗುತ್ತಿದ್ದು, ಇದು ಜಾನುವಾರುಗಳಿಗೆ ಪೌಷ್ಟಿಕಾಂಶ ನೀಡುವುದರ ಜತೆಗೆ ಹೆಚ್ಚಿನ ಹಾಲಿನ ಇಳುವರಿ ನೀಡಲು ಸಹಾಯವಾಗಲಿದೆ.

ಕುಷ್ಟಗಿ ತಾಲೂಕಿನ ಹನುಮಸಾಗರ, ಹನುಮನಾಳ, ತಾವರಗೇರಾ ಪಶು ಆಸ್ಪತ್ರೆಗಳಲ್ಲಿ ಮೇವಿನ ಬೀಜ ನೀಡಲಾಗುತ್ತಿದ್ದು, ಈ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದ ರೈತರು ಫ್ರೂಟ್ಸ್ ಐಡಿ, ಆಧಾರ ಕಾರ್ಡ, ಪಹಣಿ ನೀಡಿ ಮೇವಿನ ಬಿತ್ತನೆ ಬೀಜಗಳನ್ನು ಪಡಿಯಿರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net