ರುದ್ರಪಟ್ಟಣದಲ್ಲಿ ನಾಳೆ ಕೊಳಲು ಗಾಯನ ಕಛೇರಿ

R.K. PDMANABHA
ಆರ್.ಕೆ. ಪದ್ಮನಾಭ
Published on

ಅರಕಲಗೂಡು: ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನ.2ರಂದು ಕೊಳಲು ಗಾಯನ ಕಚೇರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದ್ವಾನ್ ಡಾ.ಆರ್.ಕೆ. ಪದ್ಮನಾಭ ತಿಳಿಸಿದರು.

ಗ್ರಾಮದ ರಾಮ ಮಂದಿರದಲ್ಲಿ ಪ್ರವಾಸೋದ್ಯಮ ಸಚಿವಾಲಯ ಹಾಗೂ ಸಂಸ್ಕೃತಿ, ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ನ. 2ರಂದು ಸಂಜೆ 5.30ರಿಂದ 6.30 ವರೆಗೆ ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮದಡಿ ವಿದ್ವಾನ್ ಅಮಿತ್ ನಾಡಿಗ್ ಅವರು ಕೊಳಲು ಕಛೇರಿ ಪ್ರಸ್ತುತ ಪಡಿಸುವರು. ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಮೋಡಿ ಮಾಡುವ ಸಂಜೆ ಕಾರ್ಯಕ್ರಮವನ್ನು ದಾಸ ಸಂಪ್ರದಾಯದಲ್ಲಿ ಆಚರಿಸಲಾಗುವುದು ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಮೈಸೂರಿನ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಸಭಾಂಗಣದಲ್ಲಿ ನ. 8ರಿಂದ 10ವರೆಗೆ ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮ ಜರುಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net