ಫೆ.22, 23ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯ

Published on

ಸುಳ್ಯ: ಐವರ್ನಾಡಿನಲ್ಲಿ ಫೆ.22 ಹಾಗೂ 23ರಂದು ಅಂತರ್ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಮುಖಂಡರಾದ ಎಸ್.ಎನ್.ಮನ್ಮಥ ನೇತೃತ್ವದಲ್ಲಿ ನಡೆಯಲಿದ್ದು, ಪಂದ್ಯಾಟದ ಯಶಸ್ಸಿಗಾಗಿ ಪೂರ್ವಭಾವಿ ಸಭೆ ಐವರ್ನಾಡಿನಲ್ಲಿ ನಡೆಯಿತು.

ಅಧ್ಯಕ್ಷ ಸಾತ್ವಿಕ್ ಕುದುಂಗು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಅಧ್ಯಕ್ಷ ಎಸ್.ಎನ್.ಮನ್ಮಥ ಮಾತನಾಡಿ, ಒಟ್ಟು 12 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದು ಅದ್ದೂರಿಯಾಗಿ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದರು.

ಸಂಚಾಲಕ ವಾಸುದೇವ ಬೊಳುಬೈಲು, ಕಾರ್ಯದರ್ಶಿ ಪ್ರಮೊದ್ ಕಣಿಲೆಗುಂಡಿ, ದೊಡ್ಡಣ್ಣ ಬರೆಮೇಲು, ಮಾಧವ ಭಟ್ ಶೃಂಗೇರಿ, ಬಾಲಕೃಷ್ಣ ಕೀಲಾಡಿ, ಮೋಹನ್ ಸುಂದರ, ಶಾಂತಾರಾಮ ಕಣಿಲೆಗುಂಡಿ, ಶಿವಪ್ರಸಾದ್ ಕಟ್ಟತ್ತಾರು, ಶಿವಪ್ರಸಾದ್ ದರ್ಖಾಸ್ತು, ಶೇಖರ ಮಡ್ತಿಲ, ಮಹೇಶ ಜಬಳೆ, ರವಿನಾಥ ಮಡ್ತಿಲ, ರಾಜೇಂದ್ರ ಪಾತಿಕಲ್ಲು, ಶರತ್ ಸಿ., ನಟರಾಜ, ರಂಜನ್ ಮೂಲೆತೋಟ, ರಮೇಶ ಮಿತ್ತಮೂಲೆ, ಗುರು ನಿಡುಬೆ, ಚಂದ್ರಕಾಂತ ಕೋಡ್ತೀಲು, ಶೇಖರ ಕೊಯಿಲ, ಜೀವನ್ ಜಬಳೆ ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net