ಮಹಾಪೂರಕ್ಕೆ ನಲುಗಿದ ಕಲಬುರಗಿ ಯಾದಗಿರಿ ಬೀದರ್ : 90ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತ್ತ

2709 KLB 01 A
ಭೀಮಾ ನದಿ ಪ್ರವಾಹದಿಂದ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮ ಜಲಾವೃತ್ತಗೊಂಡಿರುವುದು. ---
Published on

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಇಬ್ಬರು | ಕಲಬುರಗಿ-ಬೆಂಗಳೂರು ಹೆದ್ದಾರಿ ಬಂದ್

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಮಳೆ ಮತ್ತು ಪ್ರವಾಹಕ್ಕೆ ಕಲ್ಯಾಣ ಕರ್ನಾಟಕದ ಕಲಬುರಗಿ,ಯಾದಗಿರಿ ಮತ್ತು ಬೀದರ್ ಜಿಲ್ಲೆ ಅಕ್ಷರಶಃ ನಲುಗಿವೆ.ಪ್ರವಾಹಪೀಡಿತ ಜನರು ತತ್ತರಿಸಿ ಹೋಗಿದ್ದಾರೆ. ಮಹಾಪೂರ ಅಬ್ಬರಕ್ಕೆ ೯೦ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತ್ತಗೊಂಡಿವೆ. ಲಕ್ಷಾಂತರ ಎಕರೆಯಲ್ಲಿನ ಬೆಳೆಗಳು ನೀರುಪಾಲಾಗಿವೆ.ಸಂತ್ರಸ್ಥರು ಪರೇಶಾನ್ ಆಗಿದ್ದಾರೆ.

ಭೀಮಾ ನದಿ ಪ್ರವಾಹ ತೀವ್ರಗೊಂಡಿದ್ದರಿAದ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿಯ ಹಳೆಯ ಸೇತುವೆ ಮುಳುಗಡೆಯಾಗಿದ್ದು, ಹೊಸ ಸೇತುವೆಗೆ ತಾಗಿಕೊಂಡು ನೀರು ಹರಿಯುತ್ತಿದ್ದರಿಂದ ಅದರ ಮೇಲೆಯೂ ಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರ ಜಿಲ್ಲಾಡಳಿತ ಸ್ಥಗಿತಗೊಳಿಸಿದ್ದರಿಂದ ಕಲಬುರಗಿಯಿಂದ ಬೆಂಗಳೂರು, ಹುಬ್ಬಳ್ಳಿ, ವಿಜಯಪುರ ಸಂಪರ್ಕ ಕಡಿತಗೊಂಡಿದೆ. ಕೂಡಿ ದರ್ಗಾ ಮಾರ್ಗ ಬಳಸಿಕೊಂಡು ಕೆಲ ವಾಹನಗಳ ಸಂಚರಿಸುತ್ತಿವೆ.

ಕಲಬುರಗಿ ತಾಲೂಕಿನ ಸೋಮನಾಥ ಹಳ್ಳಿಯಲ್ಲಿ ಭೀಮಾ ನದಿ ಪ್ರವಾಹದಲ್ಲಿ ದನಗಾಹಿ ಅಶೋಕ ದೊಡ್ಡಮನಿ ಹಾಗೂ ನಗರದ ಹೊರವಲಯದ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಭೀಮಾಬಾಯಿ ಭಜಂತ್ರಿ (೪೫) ಇಬ್ಬರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಭೀಮಾ ಮಹಾಪೂರದಿಂದ ಅಫಲಪುರ ತಾಲೂಕಿನ ೩೦, ಕಲಬುರಗಿ ತಾಲೂಕಿನ ೧೦, ಜೇವರ್ಗಿ ತಾಲೂಕಿನ ೧೫, ಚಿತ್ತಾಪುರ ತಾಲೂಕಿನ ೧೦, ಯಾದಗಿರಿ ಮತ್ತು ವಡಗೇರಾ ತಾಲೂಕಿನ ೧೫ ಹಳ್ಳಿಗಳು ಹಾಗೂ ಮಾಂಜ್ರಾ ನದಿ ಪ್ರವಾಹದಿಂದ ಬೀದರ್ ಜಿಲ್ಲೆಯ ಕಮಲನಗರ ಮತ್ತು ಔರಾದ ತಾಲೂಕಿನ ೧೦ ಹಳ್ಳಿಗಳು ಜಲಾವೃತ್ತಗೊಂಡಿವೆ. ಪ್ರಮುಖ ಹೆದ್ದಾರಿಗಳಲ್ಲಿನ ಸೇತುವೆಗಳ ಮೇಲೆ ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಕಾಗಿಣಾ ಪ್ರವಾಹದಿಂದ ಮಳಖೇಡ ಸೇತುವೆ ಮುಳುಗಡೆಯಾಗಿದ್ದರಿಂದ ಕಲಬುರಗಿ-ಸೇಡಂ ಸಂಪರ್ಕ ಕಡಿತಗೊಂಡಿದೆ.ನಾಗರಾಳ ಜಲಾಶಯದಿಂದ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ಚಿಂಚೋಳಿ ಹಾಗೂ ಸೇಡಂ ತಾಲೂಕಿನ ಸುಮಾರು ೧೦ ಹಳ್ಳಿಗಳಿಗೆ ನೀರು ನುಗ್ಗಿದೆ. ೨೦ ಸೇತುವೆಗಳು ಮುಳುಗಿ ಸಂಚಾರ ಕಡಿತಗೊಂಡಿದೆ. ಚಿಂಚೋಳಿ ಪಟ್ಟಣದ ಕೆಲವು ಬಡಾವಣೆಗಳು ನೀರು ನುಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net