ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧ್ವಜಾರೋಹಣ

Mul_temple
Published on

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಾಮನವಮಿಯಂದು ನಡೆಯಲಿರುವ ಬ್ರಹ್ಮರಥೋತ್ಸವ ಪೂರ್ವಭಾವಿಯಾಗಿ ಚೈತ್ರ ಶುದ್ಧ ಪಂಚಮಿಯಂದು ಬುಧವಾರ ಧ್ವಜಾರೋಹಣ ನಡೆಯಿತು.

ಬೆಳಗ್ಗೆ ಮಹಾಪೂಜೆ, ಶ್ರೀ ಬಿಂದುಮಾಧವ ದೇವರು ಯಜ್ಞ ಮಂಟಪಕ್ಕೆ ಹೊರಡುವುದು. ಪ್ರಾರ್ಥನೆ, ಯಜ್ಞಾರಂಭ, ಮಧ್ಯಾಹ್ನ ಲಘು ಪೂರ್ಣಾಹುತಿ, ಯಜ್ಞಾರತಿ, ಸಂಜೆ ಯಜ್ಞ ಮಂಟಪದಿಂದ ಶ್ರಿ ಕಾಲಭೈರವ ದೇವ ದರ್ಶನ ಸಹಿತ ಸ್ವರ್ಣ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಹೊರಟು ಧ್ವಜಾರೋಹಣ, ಶ್ರೀ ಕಾಲಭೈರವ ದೇವ ದರ್ಶನ ಸಹಿತ ಬಲಿ ನಡೆಯಿತು.

ಸಂಜೆ ಮಹಾ ನೈವೇದ್ಯ, ಮಂಗಳಾರತಿ, ಭೂರಿ ಸಮಾರಾಧನೆ, ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ಕಾಲಭೈರವ ದೇವ ದರ್ಶನ ಸಹಿತ ಸ್ವರ್ಣ ಪಲ್ಲಕ್ಕಿಯಲ್ಲಿ ದೇವರಿಗೆ ದೀಪಾರಾಧನೆ ಬಲಿ, ರಾತ್ರಿ ಅಕ್ಷತ ಬಲಿ, ಸಣ್ಣ ರಥೋತ್ಸವ, ಶ್ರೀ ಕಾಲಭೈರವ ದೇವ ದರ್ಶನ ಸಹಿತ ನಿತ್ಯೋತ್ಸವ, ವಿಶೇಷ ಕಾಲಭೈರವ ದೇವ ದರ್ಶನ ಆವೇಶದ ಸುತ್ತು (ಚೆಂಡೆ ಸುತ್ತು), ಭಂಡಿ ಗರುಡೋತ್ಸವ, ವಸಂತ ಪೂಜೆ ನಡೆಯಿತು. ಕ್ಷೇತ್ರದ ಅರ್ಚಕರು, ಆಡಳಿತ ಮಂಡಳಿ, ಭಕ್ತರು ಉಪಸ್ಥತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net