ಏ.5, 6ರಂದು ಜೋಡುಕರೆ ಕಂಬಳ

Kin_Kudi Kambala
Published on

ಕಿನ್ನಿಗೋಳಿ: ಕೊಟ್ನಾಯಗುತ್ತು ಬಳಕುಂಜೆ ಕಂಬಳ ಸಮಿತಿ ವತಿಯಿಂದ ಬಳಕುಂಜ ಕರಿಯ ದೇಸಿಂಗಾರಾಯ-ಬೊಳಿಯ ದೇಸಿಂಗರಾಯ ಜೋಡುಕರೆ ಕಂಬಳ ಏ.5, 6ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಕುದಿ ಕಂಬಳ ನಡೆಯಿತು.

ಸುನೀಲ್ ಮುಕ್ಕಾಲ್ದಿ ವಿಶೇಷ ಪೂಜೆ ಸಲ್ಲಿಸಿ ಕುದಿ ಕಂಬಳಕ್ಕೆ ಚಾಲನೆ ನೀಡಿದರು.

ಕಂಬಳ ಸಮಿತಿ ಗೌರವಾಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಪ್ರಭಾಕರ ಪೂಂಜ, ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ ಬಳಕುಂಜ ಗುತ್ತು, ಪದಾಧಿಕಾರಿಗಳಾದ ಮೋಹನ್ ಕೋಟ್ಯಾನ್ ಶಿಮಂತೂರು, ಪ್ರಸಾದ್ ಶೆಟ್ಟಿ ಬಳ್ಕುಂಜೆೆ, ರಾಜೇಶ ಶೆಟ್ಟಿ ಉಳೆಪಾಡಿ, ನೆಲ್ಸನ್ ಲೋಬೊ, ಕೇಶವ ಶೆಟ್ಟಿ, ಶೇಖರ ಶೆಟ್ಟಿ ಮಡಲ್ಲ, ಶರತ್ ಶೆಟ್ಟಿ, ಸಂಕಲಕರಿಯ, ಪ್ರವೀಣ್ ಶೆಟ್ಟಿ, ದಿನಕರ ಶೆಟ್ಟಿ, ಸುರೇಂದ್ರ ಪೂಜಾರಿ, ಸಂತೋಷ್ ಶೆಟ್ಟಿ ಇನ್ನಾ, ಗಣೇಶ್ ಶೆಟ್ಟಿ ಮಡ್ಮಣ್, ಸ್ವಸ್ತಿಕ್, ಕೇಶವ ಮಾಡ, ಕೇಸರಿ ಪಿ.ರೈ, ಶಶಿ ಡಿ.ಶೆಟ್ಟಿ ಕೋಟ್ನಯಗುತ್ತು, ಸುಶೀಲಾ ಅಡ್ಯಂತಾಯ, ಜಬ್ಬಗುರಿಕಾರ, ಅಣ್ಣಪ್ಪ, ಅಜಯ್ ಶೆಟ್ಟಿ ಬಳ್ಕುಂಜೆ, ಅಬ್ದುಲ್ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net