

ಕಲಘಟಗಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ತಾಲೂಕಿನ ಸಂಗಮೇಶ್ವರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾವಿರಾರು ಮಹಿಳೆಯರು ವೀಕ್ಷಿಸಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎ.ಎಚ್. ಮುನಿಯಾರ್ ಮಾತನಾಡಿ, ಸಂಗಮೇಶ್ವರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮಹಿಳೆಯರು. ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೆಲವು ಮಹಿಳೆಯರ ಬ್ಯಾಂಕ್ ಪಾಸ್ಬುಕ್ಗಳಲ್ಲಿ ತಿದ್ದುಪಡಿಯ ತೊಂದರೆ ಉಂಟಾಗಿದ್ದು, ಅರ್ಜಿಗಳು ಸ್ಥಗಿತಗೊಂಡಿವೆ. ಅವುಗಳನ್ನು ಕೂಡಲೇ ಬಗೆಹರಿಸಿಕೊಳ್ಳಿ ಎಂದರು.
ಗ್ರಾ.ಪಂ. ಅಧ್ಯಕ್ಷ ಸುರೇಶ ನೇಸರೇಕರ್, ಉಪಾಧ್ಯಕ್ಷೆ ಪಾರ್ವತಿ ವಡ್ಡರ, ರೇಖಾ ಕಟಾಬಳಿ, ಯಲ್ಲಪ್ಪ ಕಲಘಟಕರ್, ಸಾತಪ್ಪ ಗಾಯಚೂರ್, ಸಂತೋಷ ನೇಸರೇಕರ್, ಅಜ್ಜಪ್ಪ ಜಾಧವ, ರಾಜು ರಗಟೆ, ಮಾರುತಿ ಬಾಬ್ರಿ, ಅಲ್ತಾಫ್ ಬುಕ್ಕಿಟಗಾರ, ನಾಗರಾಜ ವಡ್ಡರ ಇದ್ದರು.