ಗೂಡ್ಸ್ ಲಾರಿಗೆ ಐದು ವರ್ಷದ ಮಗು ಬಲಿ, ಚಾಲಕ ವಾಹನ ಬಿಟ್ಟು ಪರಾರಿ..

accident
Published on

ಗದಗ: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ವಾಹನ ಹಾಗೂ ಜನ ಸಂಚಾರ ಎರಡೂ ಕಡಿಮೆ ಇದ್ದರೂ ಸಂಭವಿಸಿದ ಅಪಘಾತವೊಂದಕ್ಕೆ ಐದು ವರ್ಷದ ಮಗು ಬಲಿಯಾಗಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಎಂಬ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಶಿವಾನಿ (5) ಸಾವಿಗೀಡಾದ ಮಗು. ಗೂಡ್ಸ್ ಲಾರಿಯೊಂದು ಹರಿದು ಈ ಮಗು ಮೃತಪಟ್ಟಿದೆ. ಅಪಘಾತಕ್ಕೆ ಮಗು ಬಲಿಯಾದ್ದನ್ನು ನೋಡಿದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ಮಾತ್ರವಲ್ಲ ರಸ್ತೆಯಲ್ಲಿ ವೇಗತಡೆ ಅಳವಡಿಸಲು ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಒತ್ತಾಯ. ಮುಂಡರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net