ರಾಜ್ಯದಲ್ಲಿ ಮತ್ತೆ 5 ಒಮಿಕ್ರಾನ್ ಪತ್ತೆ, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

omicron
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ 3ನೇ ಅಲೆ ಆತಂಕದ ನಡುವೆ ಒಮಿಕ್ರಾನ್ ರೂಪಾಂತರಿ ನಿಧಾನವಾಗಿ ಆವರಿಸುತ್ತಿದ್ದು, ಇಂದು ಮತ್ತೆ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯುಕೆಯಿಂದ ಬಂದಿದ್ದ 19 ವರ್ಷದ ಯುವಕ, ದೆಹಲಿಯಿಂದ ವಾಪಸಾಗಿರುವ 36 ವರ್ಷ ವಯಸ್ಸಿನ ವ್ಯಕ್ತಿ, 70 ವರ್ಷ ವಯಸ್ಸಿನ ವೃದ್ಧೆಗೆ ಸೋಂಕು ತಗುಲಿದೆ. ಹಾಗೆಯೇ ನೈಜಿರಿಯಾದಿಂದ ಬಂದಿರುವ 52 ವರ್ಷದ ವ್ಯಕ್ತಿ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದಿರುವ 33 ವರ್ಷದ ವ್ಯಕ್ತಿಗೆ ಒಮಿಕ್ರಾನ್ ರೂಪಾಂತರಿ ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net