ಕುದೂರು: ತಿಪ್ಪಸಂದ್ರ ಹೋಬಳಿಯ ತಾವರೇಕೆರೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಕುದೂರು ಪೊಲೀಸರು, ಐವರು ಜೂಜುಕೋರರನ್ನು ಬಂಧಿಸಿ ₹10,300 ನಗದು, 1 ಬುಲೆಟ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ತಿಪ್ಪಸಂದ್ರ ಹೋಬಳಿಯ ತಾವರೆಕೆರೆಯ ಮುನಿರಾಜು, ಕುಮಾರ್, ಅಜಯ್, ಕೃಷ್ಣಪ್ಪ, ನೆಲಮಂಗಲ ತಾಲೂಕಿನ ಕೃಷ್ಣಾಪುರದ ದರ್ಶನ್ ಬಂಧಿತರು. ತಾವರೆಕೆರೆ ಗ್ರಾಮದ ಹನುಮಂತ, ಗುರು, ಸಂತೋಷ್, ಕುಮಾರ್, ನರಸಿಂಹರಾಜು, ಸಂಜಯ್, ಕಾಂತರಾಜು, ತಾವರೇಕೆರೆ ಕಾಲೋನಿಯ ಮಾರುತಿ ಪರಾರಿಯಾಗಿದ್ದಾರೆ. ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕುದೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಜಗದೀಶ್ ನಾಯಕ್ ಮತ್ತು ಸಿಬ್ಬಂದಿ ಸತೀಶ್, ಗುರುಮೂರ್ತಿ, ಶಿವಣ್ಣ ದಾಳಿ ನಡೆಸಿದ್ದಾರೆ. ಕುದೂರು ಠಾಣೆಯಲ್ಲಿ ದೂರು ದಾಖಲಾಗಿದೆ.