ಸಹಸ್ರಲಿಂಗದಲ್ಲಿ ಐವರು ನೀರುಪಾಲು..?

Sahasra Linga
Published on

ಶಿರಸಿ: ಭಾನುವಾರ ತಾಲೂಕಿನ ಸಹಸ್ರಲಿಂಗದಲ್ಲಿ ಈಜಲು ಹೋಗಿದ್ದ ಐವರು ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟ ಅನುಮಾನ ಮೂಡಿದೆ.

ಶಿರಸಿ ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್‌ ರೆಹಮಾನ್‌ (44), ನಾದಿಯಾ ನೂರ್ ಅಹಮದ್ (20), ನಬಿಲ್ ನೂರ್ ಅಹಮದ್ ಶೇಖ್ (22), ಉಮರ್ ಸಿದ್ದಿಕ್(25) ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21ನಾಪತ್ತೆಯಾದವರು.

ಭಾನುವಾರದ ಕಾರಣ ವಿಹಾರಕ್ಕಾಗಿ ಶಾಲ್ಮಲಾ ನದಿಗೆ ಈಜಲು ತೆರಳಿದ್ದರು. ಆದರೆ, ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಿಸಲು ಹೋಗಿ ಇನ್ನೊಬ್ಬರು ನೀರಿಗೆ ಬಿದ್ದಿರಬಹುದು ಎನ್ನಲಾಗಿದೆ. ಗ್ರಾಮೀಣ ಠಾಣೆ‌ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net