More

    ರಿಲೀಸ್​ಗೂ ಮುನ್ನವೇ ಹೊರಬಿತ್ತು ‘ಡಂಕಿ’ ಸಿನಿಮಾ ವಿಮರ್ಶೆ! ಹೇಗಿದೆ ಗೊತ್ತಾ ಶಾರುಖ್ ಚಿತ್ರ?

    ಹೈದರಾಬಾದ್​: ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ನಿರ್ದೇಶನದ ಹಾಗೂ ಶಾರುಖ್ ಖಾನ್​ ಅಭಿನಯದ ಬಹುನಿರೀಕ್ಷಿತ ‘ಡಂಕಿ’ ಇದೇ ಡಿಸೆಂಬರ್​ 21 ರಂದು ತೆರೆಗೆ ಬರಲು ಸಕಲ ತಯಾರಿಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಸಿನಿಮಾ ಟ್ರೇಲರ್​ ಮತ್ತು ಟೀಸರ್​ನಿಂದಲೇ ಭಾರೀ ಸದ್ದು ಮಾಡಿದೆ. ಸದ್ಯ ತಮ್ಮ ನೆಚ್ಚಿನ ನಟನ ಚಿತ್ರವನ್ನು ಬೆಳ್ಳಿ ಪರದೆಯ ಮೇಲೆ ವೀಕ್ಷಿಸಲು ಕಾತರದಿಂದ ಕಾಯುತ್ತಿರುವ ಫ್ಯಾನ್ಸ್​ಗೆ ತಾನೊಬ್ಬ ಚಿತ್ರ ವಿಮರ್ಶಕ ಎಂದು ಹೇಳಿಕೊಳ್ಳುವ ದುಬೈ ಮೂಲದ ಉಮೈರ್​ ಸಿಂಧು ವಿಮರ್ಶೆ ಬರೆದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವುದು ಭಾರೀ ಆಶ್ವರ್ಯಕ್ಕೆ ಕಾರಣವಾಗಿದೆ. ಹಾಗಾದ್ರೆ, ಅವರು ಬರೆದಿದ್ದೇನು? ಅದು ಅಸಲಿ ಕಥೆಯೋ? ಅಲ್ವೋ ಇಲ್ಲಿದೆ ಮಾಹಿತಿ…

    ಇದನ್ನೂ ಓದಿ: ತಾವು ಓದಿದ ಶಾಲೆಯನ್ನೇ ದತ್ತು ಪಡೆದ ನಟ ರಿಷಭ್​ ಶೆಟ್ಟಿ; ಮೆಚ್ಚುಗೆಯ ಮಹಾಪೂರ

    ‘ಡಂಕಿ’ ಶಾರುಖ್ ಅವರ ಮುಂಬರುವ ಚಿತ್ರವಾಗಿದ್ದು, ನಾಯಕಿಯಾಗಿ ನಟಿ ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿದ್ದಾರೆ. ಬೊಮನ್ ಇರಾನಿ, ವಿಕ್ಕಿ ಕೌಶಲ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇದೇ ಡಿಸೆಂಬರ್ 21 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ರಿಲೀಸ್​ಗೂ ಮುನ್ನವೇ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ದುಬೈ ಮೂಲದ ಉಮೈರ್​ ಸಂಧು, ಡಂಕಿ ಕುರಿತು ತಮ್ಮ ಮೊದಲ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.

    ‘ಡಂಕಿ’ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಉಮೈರ್ ಸಂಧು, “ಒಂದು ಸುದೀರ್ಘ ಕಥೆಯನ್ನು ಚಿಕ್ಕದಾಗಿ ಹೇಳುವುದಾದರೆ ತುಂಬಾ…ತುಂಬಾ ಚೆನ್ನಾಗಿದೆ. ಇದರ ಅರ್ಥವೇನೆಂದು ತಿಳಿಯಲು ಈ ಚಿತ್ರ ನೋಡಿ! ಶಾರುಖ್ ಖಾನ್ ಬ್ಯಾಂಗ್ ಮಾಡಿದ್ದು, ರಾಜ್‌ಕುಮಾರ್ ಹಿರಾನಿ ಮರಳಿದ್ದಾರೆ. ಇದು 2023ರ ಅತ್ಯುತ್ತಮ ಕುಟುಂಬ ಮನರಂಜನಾ ಸಿನಿಮಾವಾಗಿದೆ” ಎಂದಿದ್ದಾರೆ.

    ಇದನ್ನೂ ಓದಿ: ಕಬ್ಬನ್‌ ಪಾರ್ಕ್​ನಲ್ಲಿ ‘ಸಿರಿಧಾನ್ಯ ನಡಿಗೆ’; ಉತ್ಸಾಹದಿಂದ ಹೆಜ್ಜೆ ಹಾಕಿದ ಯುವ ಸಮೂಹ

    ಇದಿಷ್ಟೇ ಅಲ್ಲದೆ, ಉಮೈರ್​ ಸಂಧು, ‘ಡಂಕಿ’​ ಚಿತ್ರಕ್ಕೆ 5ರಲ್ಲಿ 4 ರೇಟಿಂಗ್​ ನೀಡಿದ್ದು, ಇದೊಂದು ಭಾವನಾತ್ಮಕ ವಿಷಯವನ್ನು ಹೊಂದಿರುವ ಚಿತ್ರ ಎಂದು ಕೂಡ ಬಹಿರಂಗಪಡಿಸಿದ್ದಾರೆ. “ಯುವಕರನ್ನು ಪ್ರೇರೇಪಿಸುವ ಸಾಕಷ್ಟು ಒಳ್ಳೆಯ ಅಂಶಗಳಿವೆ. ಈ ಸಿನಿಮಾ ಶಾರುಖ್ ಖಾನ್ ಅವರ ಹಿಂದಿನ ಸಿನಿಮಾಗಳು ಮತ್ತು ಸಾಧನೆಗಳನ್ನು ಮರೆಯುವಂತೆ ಮಾಡಲಿದೆ. ಹಾರ್ಡಿ ಪಾತ್ರದಲ್ಲಿ ಶಾರುಖ್ ಅದ್ಭುತ ಅಭಿನಯದಿಂದ ನಿಮ್ಮನ್ನು ಮೆಚ್ಚಿಸಲಿದ್ದಾರೆ” ಎಂದು ಉಮೈರ್ ಬರೆದುಕೊಂಡಿದ್ದಾರೆ.

    ಚಿತ್ರದಲ್ಲಿ ಶಾರುಖ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಸತೀಶ್ ಶಾ, ಬೋಮಾನಿ ಇರಾನಿ, ಜೆರ್ಮಿ ವಿಲ್ಲರ್ ಮುಂತಾದವರ ತಾರಾಗಣವಿದೆ. ಡಂಕಿ ಬಿಡುಗಡೆ ಬಾಕ್ಸ್​ ಆಫೀಸ್​ನಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ? ಸಲಾರ್​ಗೆ ಪೈಪೋಟಿ ಕೊಡಲಿದ್ಯಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

    ಮುಂದಿನ ಎರಡು ದಿನ ಈ ರಾಜ್ಯದ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ!; ಹವಾಮಾನ ಇಲಾಖೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts