

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯಜಿವಿ ವಲಯ ವ್ಯಾಪ್ತಿಯ ಶಿವಪುರದಲ್ಲಿ ನಾಡ ಬಂದೂಕು ಮತ್ತು ವನ್ಯಜೀವಿ ಉತ್ಪನ್ನಗಳ ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಸಲಾಗಿದೆ.
ಜೊಯಿಡಾ ತಾಲೂಕಿನ ಶಿವಪುರದ ಮನೆಯಲ್ಲಿ ಅರಣ್ಯ ಇಲಾಖೆಯಿಂದ ಶೋದ ನಡೆಸಿ ನಾರಾಯಣ. ತಿಮ್ಮಣ್ಣ. ಮಹಾಲೆ, ರಘುನಾಥ ತಿಮ್ಮಣ್ಣ. ಮಹಾಲೆ, ಸುಧಾಕರ ವಡ್ಡೋ. ಮಹಾಲೆ, ಮಾರುತಿ. ಕೃಷ್ಣಮೂರ್ತಿ. ಲಕ್ಕೊಳ್ಳಿ, ಶಶಾಂಕ ನಾರಾಯಣ ಮಹಾಲೆ ಇವರನ್ನ ಬಂದಿಸಲಾಗಿದೆ. ಆರೋಪಿತರಿಂದ ಚಿರತೆಯ 7 ಉಗುರು, ಕಡವೆ ಮಾಂಸ,ಉಡದ ಚರ್ಮ, ಕಿಂಗ್ ಪೀಷರ್ ಕೊಕ್ಕು, ನಾಡ ಬಂದೂಕ, ಪಕ್ಷಿ ಬಲೆ,ಗಂದದ ಉತ್ಪನ್ನ,ಮದ್ದು,ಹುಸಿ ಬಾಂಬುಗಳನ್ನು ಪತ್ತೆಮಾಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.