More

    ಜಿಲ್ಲೆಯಲ್ಲಿ ಪಕ್ಷಿ ಗಣತಿ ಮಾಡಲು ಎಪಿಸಿಸಿಎಫ್‌ ಕುಮಾರ ಪುಷ್ಕರ್‌ ಸೂಚನೆ

    ಕಾರವಾರ: ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಸಹಕಾರದಿಂದ ಈ ವರ್ಷ ಜಿಲ್ಲೆಯಲ್ಲಿ ಪಕ್ಷಿಗಳ ಗಣತಿ ನಡೆಸಿ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್‌) ಕುಮಾರ ಪುಷ್ಕರ್ ಜಿಲ್ಲೆಯ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಲ್ಲೆಯ ನೋಡಲ್ ಅಧಿಕಾರಿಯೂ ಆಗಿರುವ ಅವರು ಕೆನರಾ ವೃತ್ತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದರು. ಶಿರಸಿಯ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಅಧಿಕಾರಿಗಳಿಗೆ ವಿವಿಧ ಸೂಚನೆ ನೀಡಿದರು. ಜಿಲ್ಲೆಯು ಜೀವ ಸಂಕುಲ ವೈವಿಧ್ಯಮಯವಾಗಿದ್ದು, ಅವುಗಳ ದಾಖಲಾತಿ ಅಗತ್ಯವಿದೆ ಎಂದರು. ಯಾವುದೇ ಹೊಸ ಅತಿಕ್ರಮಣಕ್ಕೆ ಅವಕಾಶ ನೀಡದಂತೆ ಸೂಚನೆ ನೀಡಿದರು. ಅರಣ್ಯ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ವನ್ಯ ಪ್ರಾಣಿಗಳ ರಕ್ಷಣೆ ಮಾಡಲು ಕ್ರಮ ವಹಿಸಿ ಎಂದರು.
    ಸಿಸಿಎಫ್ ವಸಂತರೆಡ್ಡಿ ಅವರು ಜಿಲ್ಲೆಯಲ್ಲಿ ಕೈಗೊಂಡ ಅರಣ್ಯ ರಕ್ಷಣೆ ಕಾರ್ಯಗಳು, ವನ್ಯ ಪ್ರಾಣಿಗಳ ಸಂರಕ್ಷಣೆ, ಇಲಾಖೆಯ ಕಾಮಗಾರಿಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಇಲಾಖೆಯ ಸಿಬ್ಬಂದಿ ಕೊರತೆಯನ್ನು ಗಮನಕ್ಕೆ ತಂದರು.
    ಕುಮಾರ ಪುಷ್ಕರ್ ಅವರು ಜಿಲ್ಲೆಯ ದಾಸ್ತಾನು ಕೊಠಡಿ, ಉಂಚಳ್ಳಿ ಜಲಪಾತ, ಉಂಚಳ್ಳಿ ಹುಲಿದೇವರಬನ, ರಾಮಪತ್ರೆ ಜಡ್ಡಿಗೆ ಭೇಟಿ ನೀಡಿದರು.
    ಶಿರಸಿ ಅರಣ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಅರಣ್ಯಕ್ಕೆ ಬೆಂಕಿ ಬೀಳುವುದು, ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ವಿಸ್ತ್ರತ ಅಧ್ಯಯನ ನಡೆಸುವಂತೆ ಸೂಚನೆ ನೀಡಿದರು. ಅಲ್ಲದೆ, ಮಾರ್ಗ ಮಧ್ಯೆ ಹುಲೇಕಲ್ ವಲಯ ಅರಣ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿ ಜತೆ ಚರ್ಚಿಸಿದರು. ಯಲ್ಲಾಪುರ ಕಿರವತ್ತಿ ಕಟ್ಟಿಗೆ ಡಿಪೋಕ್ಕೆ ಭೇಟಿ ನೀಡಿ ದಾಸ್ತಾನು ಹಾಗೂ ಇ-ಆಕ್ಷನ್ ಪ್ರಕ್ರಿಯೆ ಪರಿಶೀಲನೆ ನಡೆಸಿದರು.

    ಇದನ್ನೂ ಓದಿ: ಹೆಗಡೆಯಲ್ಲಿ ಪಂಜರ‌ ಬಂಧಿಯಾದ ಚಿರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts