

ಕುಮಟಾ: ವಲಯ ವ್ಯಾಪ್ತಿಯಲ್ಲಿ ಹೆಗಡೆ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡು ಜನರಿಗೆ ಭಯ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಬುಧವಾರ ಪಂಜರದಲ್ಲಿ ಬಂದಿಯಾಗಿ ಸಿದ್ದಾರೆ.
ಚಿರತೆ, ಜಾನುವಾರು, ನಾಯಿಗಳನ್ನು ಹಿಡಿಯುತ್ತಿದ್ದ ದೂರಿತ್ತು. ಹಾಗಾಗಿ ಪಂಜರ ಇಡಲಾಗಿತ್ತು. 4 ವರ್ಷದ ಗಂಡು ಚಿರತೆ ಬೋನ್ ನಲ್ಲಿ ಸಿಕ್ಕಿಹಾಕಿಕೊಂಡಿದೆ.
ಡಿಎಫ್ ಒ ರವಿಶಂಕರ ಸಿ., ಎಸಿಎಫ್ ಜಿ.ಲೋಹಿತ ಮಾರ್ಗ ದರ್ಶನದಲ್ಲಿ ಆರ್ ಎಫ್ಒ ಎಸ್.ಟಿ. ಪಟಗಾರ, ಡಿಆರ್ ಎಫ್ಒ
ರಾಘವೇಂದ್ರ ಹೂವಣ್ಣ, ಗೌಡ ಅರಣ್ಯ ರಕ್ಷಕ ರಾಘವೇಂದ್ರ ನಾಯ್ಕ, ಸಂಗಮೇಶ, ಚಾಲಕ ಮಂಜು ಸುರೇಶ ನಾಯ್ಕ್, ಉರಗ ರಕ್ಷಕ ಪವನ್ ನಾಯ್ಕ್ ರವರ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಊರಿನ ಜನರ ಸಹಕಾರದೊಂದಿಗೆ ಚಿರತೆ ಬೋನಿಗೆ ಬೀಳಿಸುವಲ್ಲಿ ಯಶಸ್ಷಿಯಾಗಿದ್ದಾರೆ.
ಇದನ್ನೂ ಓದಿ: ಜನವರಿಯಲ್ಲಿ ಐದು ದಿನಗಳ ಕರಾವಳಿ ಉತ್ಸವ