ಉತ್ತರ ಪಿನಾಕಿನಿಯಲ್ಲಿ ಮೀನುಗಳ ಸಾವು

FotoJet (2)
Published on

ವಿಷಪೂರಿತ ರಾಸಾಯನಿಕ ಸೇವನೆ ಶಂಕೆ

 ಗೌರಿಬಿದನೂರು: ತಾಲೂಕಿನ ವೀರಗೊಲ್ಲಹಳ್ಳಿ ಸಮೀಪದ ಮರಳೂರು ಕಾಲುವೆ ಮತ್ತು ಬೈ ಪಾಸ್ ರಸ್ತೆ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೇಲ್ಸೇತುವೆ ಬಳಿ ವಿಷಯುಕ್ತ ರಾಸಾಯನಿಕ ಸೇವಿಸಿ ಸಾವಿರಾರು ಮೀನುಗಳು ಮೃತಪಟ್ಟಿವೆ.

ಸೇತುವೆ ಸಮೀಪ ರಾಸಾಯನಿಕದ ದುರ್ನಾತದಿಂದ ಭಾನುವಾರ ಸ್ಥಳೀಯರು ಸ್ಥಳ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಎಚ್.ಎನ್.ವ್ಯಾಲಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಎನ್.ಎನ್.ವ್ಯಾಲಿಯ ಸಂಸ್ಕರಿತ ನೀರಿನ ಪರಿಣಾಮ ಅಥವಾ ಕಾರ್ಖಾನೆಗಳು ವಿಲೇವಾರಿ ಮಾಡುವ ರಾಸಾಯನಿಕಗಳಿಂದ ಉತ್ತರ ಪಿನಾಕಿನಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ ಎಂದು ದೂರಿರುವ ಸ್ಥಳೀಯರು ಉತ್ತರ ಪಿನಾಕಿನಿ ನದಿ ನೀರು ಕಾಲುವೆ ಮೂಲಕ ಮರಳೂರು ಕೆರೆ ಸೇರುತ್ತದೆ. ಇದೇ ನೀರು ಭೂಮಿಯಲ್ಲಿ ಇಂಗಿ ಕೊಳವೆ ಬಾವಿಗಳ ಮೂಲಕ ಮನುಷ್ಯನ ದೇಹ ಸೇರುತ್ತಿದೆ. ಈ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net