Fish catching 2 ವರ್ಷವಾದರೂ ಜಾರಿಯಾಗದ ಮಾಜಾಳಿ ಬಂದರು ರೂಪಾಲಿ ಆಕ್ಷೇಪ

Fish catching
Published on

ಕಾರವಾರ,Fish catching: ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯನ್ನು ಸಾಗರಮಾಲಾ ಯೋಜನೆ ಎಂದು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸಿದರು.

ಯುವ ಮೀನುಗಾರರ ಸಂಘರ್ಷ ಸಮಿತಿ ನಗರದ ಬೈತಖೋಲ್ ಅಲೆ ತಡೆಗೋಡೆ ಪ್ರದೇಶದಲ್ಲಿ ಭಾನುವಾರ ಆಯೋಜಿಸಿದ್ದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯ(Fish catching) ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಹಿಂದೆ ಕಾಂಗ್ರೆಸ್ ಸರ್ಕಾರ ಇರುವ ಸಮಯದಲ್ಲೇ ಕಾರವಾರ ಬಂದರು ವಿಸ್ತರಣೆಗೆ ಅಡಿಗಲ್ಲು ಹಾಕಲಾಯಿತು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮತ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಬಿಜೆಪಿ ಹೆಸರು ಹೇಳಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದೆ ನನ್ನ ಶಾಸಕತ್ವ ಅವಧಿಯಲ್ಲಿ ಕಾರವಾರ ಬೈತಖೋಲ್ ಬಂದರು ದಕ್ಕೆ ವಿಸ್ತರಣೆ, ಶೌಚಗೃಹ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಸುಮಾರು 4 ಕೋಟಿ ರೂ. ಹಣ ಬಿಡುಗಡೆಯಾಯಿತು.

ಆದರೆ, ಇದುವರೆಗೂ ಕಾಮಗಾರಿ ಆಗಿಲ್ಲ. ಕಾರವಾರ ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಸಾಗರ ಮಾಲಾ ಯೋಜನೆಯಡಿ ಅನುಮೋದನೆ ದೊರಕಿತು. ಆದರೆ, ಆ ಕಾಮಗಾರಿಯೂ ಇದುವರೆಗೂ ಬಂದಿಲ್ಲ. ಮೀನುಗಾರರು ಅವುಗಳನ್ನು ಪ್ರಶ್ನಿಸಬೇಕು ಎಂದರು.

ಮೀನುಗಾರರ ಸಂಕಷ್ಟ ಸಾಕಷ್ಟಿದ್ದು, ಅವುಗಳ ಬಗ್ಗೆ ನನಗೆ ಅರಿವಿದೆ. ಇದರಿಂದ ಅವರ ಬೆಂಬಲಕ್ಕೆ ನಾನೆಂದೂ ಬದ್ಧ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಅವರು ಅಕಾಲಿಕವಾಗಿ ನಿಧನರಾದ ಎಲ್ಲರಿಗೂ ಆಸರೆಯಾಗಿದ್ದರು.

ಅವರ ಹೆಸರನ್ನು ಕಾರವಾರದ ಫ್ಲೈ  ಓವರ್‌ಗೆ ಅಥವಾ ಕಾರವಾರದ ಸುರಂಗ ಮಾರ್ಗಕ್ಕೆ ಇಡಬೇಕು. ಈ ನಿಟ್ಟಿನಲ್ಲಿ ನಗರಸಭೆ ಠರಾವು ಮಾಡಿ ಸರ್ಕಾರಕ್ಕೆ ಕಳಿಸಿದಲ್ಲಿ ಬೆಂಗಳೂರು ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

ಕಾರವಾರ ಬೈತಖೋಲ್ ಬಂದರು ಪ್ರದೇಶದ ಜನರನ್ನು ಒಕ್ಕಲೆಬ್ಬಿಸಬಾರದು. ಹಾಗೇನಾದರೂ ಮಾಡಿದಲ್ಲಿ ಹೋರಾಟಕ್ಕೆ ನಾವು ಬದ್ಧ ಎಂದರು.

Fish catching ಗಾಳ ಹಾಕಿದ ಅಧ್ಯಕ್ಷ

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಮೀನು ಹಿಡಿಯುವ ಸ್ಪರ್ಧೆಗೆ (Fish catching)  ಚಾಲನೆ ನೀಡಿದರು. ಸದಸ್ಯರಾದ ರಾಜೇಶ ಮಾಜಾಳಿಕರ್, ಸ್ನೇಹಲ್ ಹರಿಕಂತ್ರ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ಬೇಲೆಕೇರಿ ಮೀನುಗಾರರ ಸೊಸೈಟಿ ಅಧ್ಯಕ್ಷ ಪ್ರಮೋದ ಬಾನಾವಳಿಕರ್

ಚಿತ್ತಾಕುಲಾ ಗ್ರಾಪಂ ಸದಸ್ಯ ಸುಭಾಷ ದುರ್ಗೇಕರ್, ಕಾರವಾರ ಬಂದರು ಸಂರಕ್ಷಣಾಽಕಾರಿ ಸುರೇಶ ಶೆಟ್ಟಿ, ಕಾರವಾರ ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷ ಗೌರೀಶ ಉಳ್ವೇಕರ್, ಪರ್ಸೀನ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಶಾಂತ ತಾಂಡೇಲ, ಅಖಿಲ ಕೋಮಾರಪಂತ ಸಂಘ ಕೇಂದ್ರ ಕಮಿಟಿಯ ಶಿಕ್ಷಣ ಸಮಿತಿಯ ಅಧ್ಯಕ್ಷ ದೇವಿದಾಸ ನಾಯ್ಕ, ಯುವ ಮೀನುಗಾರರ ಸಂಘರ್ಷ ಸಮಿತಿಯ ಗೌರವ ಅಧ್ಯಕ್ಷ ಆನಂದು ರಾಮಾ ಹರಿಕಂತ್ರ ಇದ್ದರು. ಯುವ ಮೀನುಗಾರರ ಸಂಘರ್ಷ ಸಮಿತಿಯ ಅಧ್ಯಕ್ಷ ವಿನಾಯಕ ಹರಿಕಂತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗಾಳ ಹಾಕಿ ಮೀನು ಹಿಡಿಯಲು ಅವಕಾಶ ಮಾಡಿಕೊಡಲಾಗಿತ್ತು. ಪುಣಾ, ಗೋವಾ, ಕುಮಟಾ ಸೇರಿ ವಿವಿಧೆಡೆಗಳಿಂದ ಸುಮಾರು 47 ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೇಳೂರಿನ ತಿಲಕ ಗೌಡ ಒಟ್ಟು 50 ಮೀನು ಹಿಡಿದು ಮೊದಲ ಬಹುಮಾನ, ಗಣೇಶ ಗುನಗಿ 36 ಮೀನು ಹಿಡಿದು ಎರಡನೇ ಬಹುಮಾನ, 30 ಮೀನು ಹಿಡಿದ ನಿರಂಜನ ಗೌಡ ಮೂರನೇ ಬಹುಮಾನ ಪಡೆದರು.ಇದನ್ನೂ ಓದಿ: https://www.vijayavani.net/president-of-dandeli-sahitya-sammelanahttps://youtube.com/shorts/_26jN7UjYqc?feature=share

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net