President: ಉಮಾಕಾಂತ ಪಾಟೀಲ್‌ ದಾಂಡೇಲಿ 3 ನೇ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ

president

ದಾಂಡೇಲಿ: ತಾಲೂಕ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ(President) ನಿವೃತ್ತ ಪ್ರಾಂಶುಪಾಲ, ವಿಜಯವಾಣಿ ಪತ್ರಿಕೆಯ ವರದಿಗಾರ ಯು.ಎಸ್.ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ದಾಂಡೇಲಿ ತಾಲೂಕು ಕಸಾಪ ಕಾರ್ಯಕಾರಿ ಸಮಿತಿಯು ಸಭೆ ನಡೆಸಿ, ಪಾಟೀಲ ಅವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ತಾಲೂಕಿನ ಆಲೂರಿನಲ್ಲಿ ಫೆಬ್ರವರಿ 28 ರಂದು 3 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ದಾಂಡೇಲಿ ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಮುರ್ತುಜಾಹುಸೇನ್ ಆನೆಹೊಸೂರು, ಕಾರ್ಯದರ್ಶಿಗಳಾದ ಪ್ರವೀಣ ನಾಯ್ಕ, ಗುರುಶಾಂತ ಜಡೆಹಿರೇಮಠ, ಕೋಶಾಧ್ಯಕ್ಷ ಶ್ರೀಮಂತ ಮಾದರಿ, ಸದಸ್ಯರಾದ ಕಲ್ಪನಾ ಪಾಟೀಲ, ಸುರೇಶ ಪಾಲನಕರ್, ಸುರೇಶ ಕಾಮರ್, ನಾಗೇಶ ನಾಯಕ ಇದ್ದರು.

President ಪರಿಚಯ

ಉಮಾಕಾಂತ ಸೋಮನಗೌಡ ಪಾಟೀಲ್ ಎಂಬುದು ಯು.ಎಸ್.ಪಾಟೀಲ ಅವರ ಪೂರ್ಣ ಹೆಸರು. ಬಂಗೂರುನಗರ ಪದವಿ ಕಾಲೇಜ್ ಉಪನ್ಯಾಸಕರಾಗಿ ದಾಂಡೇಲಿಗೆ ಆಗಮಿಸಿದ ಅವರು ಇಲ್ಲಿಯವರೇ ಆಗಿ ಹೋಗಿದ್ದಾರೆ. 37 ವರ್ಷ ಬಂಗೂರು ನಗರ ಕಾಲೇಜ್‌ನಲ್ಲಿ ಸೇವೆ ಸಲ್ಲಿಸಿದ ಅವರು ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರವೂ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
30 ವರ್ಷಗಳಿಂದ ಅವರು ಅವರು ಪತ್ರಕರ್ತರಾಗಿದ್ದು, 13 ವರ್ಷಗಳಿಂದ ವಿಜಯವಾಣಿ ವರದಿಗಾರರಾಗಿದ್ದಾರೆ. ಸದಾ ಸಕಾರಾತ್ಮಕ ಮನೋಭಾವದ ಯು.ಎಸ್.ಪಾಟೀಲ ಅವರು, ದಾಂಡೇಲಿಯ ಪ್ರತಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

2013-14ರಲ್ಲಿ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಿಯುಸಿ ನೂತನ ಇತಿಹಾಸ ಪುಸ್ತಕದ ಪರಿಶೀಲನಾ ಸಮಿತಿಯ ಸದಸ್ಯರಾಗಿ, ರಾಜ್ಯಮಟ್ಟದ ಮೌಲ್ಯಮಾಪಕರಾಗಿ ಮೌಲ್ಯಮಾಪನ ಮುಖ್ಯ ಅಧ್ಯಕ್ಷರಾಗಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಇತಿಹಾಸ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಕವಿವಿ ಕ್ರಿಕೆಟ್ ತಂಡದ ಸದಸ್ಯರಾಗಿ, ಲಯನ್ಸ ಕ್ಲಬ್‌ನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಜಿಲ್ಲಾ ಚೇರ್ಮನ್ನರಾಗಿ, ಅಂತಾರಾಷ್ಟ್ರೀಯ ಲಯನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ,

ತಾಲೂಕು ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕರಾಗಿ, ದಾಂಡೇಲಿ ಪ್ರೆಸ್ ಕ್ಲಬ್ ನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ (President), ಜಿಲ್ಲಾ ಪದವಿಪೂರ್ವ ಮಾವಿದ್ಯಾಲಯಗಳ ನೌಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದಲ್ಲಿ ಸಮನ್ವಯ ಅಕಾರಿಯಾಗಿ, ದಾಂಡೇಲಿಯ ಬಾಬಾ ಹಜರತ್ ಅಲಿ ದರ್ಗಾದ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: https://www.vijayavani.net/women-and-child-department-meeting meeting ಜಿಲ್ಲೆಯಲ್ಲಿ 1 ವರ್ಷದಲ್ಲಿ 261 ಮಹಿಳಾ ದೃಜನ್ಯ ಪ್ರಕರಣ

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…