

ಮಂಗಳೂರು : ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಅತಿ ಹಿರಿಯ ಹುಲಿ ವಿಕ್ರಂ ಸೋಮವಾರ ಮೃತಪಟ್ಟಿದೆ. 2003ರಲ್ಲಿ ಶಿವಮೊಗ್ಗದಿಂದ ಈ ಈ ಹುಲಿಯನ್ನು ತರಲಾಗಿತ್ತು.
21 ವರ್ಷ ಕಾಲ ಬದುಕಿದ ಈ ಹುಲಿ ವಯಸ್ಸಿನ ಕಾರಣದಿಂದ ಸೋಮವಾರ ಬೆಳಗ್ಗೆ ಸಾವನ್ನಪ್ಪಿರುವುದಾಗಿ ಪಿಲಿಕುಳ ವನ್ಯಜೀವಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.