More

    ಭಾರತದಲ್ಲಿ 2+2 ಸಚಿವಾಲಯ ಮಟ್ಟದ ಸಭೆಗೆ ಸಿದ್ಧತೆ

    ವಾಷಿಂಗ್ಟನ್/ದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, 2+2 ಸಚಿವಾಲಯ ಮಟ್ಟದ ಸಭೆಗೆ ಸಿದ್ಧತೆ ನಡೆದಿದೆ. ಇದು ಮೂರನೇ ಆವೃತ್ತಿಯ ಸಭೆಯಾಗಿದೆ. ಚೀನಾದಿಂದಾಗಿ ಜಗತ್ತು ಸಂಕಷ್ಟ ಅನುಭವಿಸುತ್ತಿದ್ದು, ವಿಶೇಷವಾಗಿ ಅಮೆರಿಕ ಮತ್ತು ಭಾರತ ದೇಶಗಳು ವ್ಯೂಹಾತ್ಮಕ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿನ ಈ ಸಭೆ ಮಹತ್ವ ಪಡೆದುಕೊಂಡಿದೆ.

    ಈ ಸಭೆಯು ಮುಂದಿನವಾರ 26 ಮತ್ತು 27ರಂದು ನಿಗದಿಯಾಗಿದ್ದು, ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸೇನಾ ಸಂಬಂಧ, ಬೇಹುಗಾರಿಕಾ ಮಾಹಿತಿ ವಿನಿಮಯ ಮತ್ತು ಚೀನಾ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸವಾಲುಗಳ ಕುರಿತು ಪ್ರಮುಖವಾಗಿ ಚರ್ಚೆಯಾಗಲಿದೆ.

    ಇದನ್ನೂ ಓದಿ:  ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್​

    ಈ ವಿಚಾರವನ್ನು ಮೈಕ್ ಪೊಂಪಿಯೋ ಹೇಳಿದ್ದು, ಕಾತರದಿಂದ ಸಭೆಯನ್ನು ಎದುರು ನೋಡುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ, ಮುಂದಿನ ತಿಂಗಳು ಭಾರತದ ಕರಾವಳಿಯಲ್ಲಿ ನಡೆಯಲಿರುವ ಅತಿ ದೊಡ್ಡ ಮಟ್ಟದ ಮಲಬಾರ್ ನೌಕಾ ಕಸರತ್ತಿನಲ್ಲಿ ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾದ ನೌಕಾಪಡೆಗಳು ಪಾಲ್ಗೊಳ್ಳಲಿವೆ. (ಏಜೆನ್ಸೀಸ್)

    ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಆಸ್ತಿ ನವೆಂಬರ್ 10ಕ್ಕೆ ಹರಾಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts