ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್‌ಗೆ ಪ್ರಥಮ ಸ್ಥಾನ

cricket
ಬ್ರಹ್ಮಾವರದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಕುಂದಾಪುರದ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಪ್ರಥಮ ಸ್ಥಾನ ಪಡೆಯಿತು.
Published on

ಕುಂದಾಪುರ: ಬ್ರಹ್ಮಾವರ ಜಾಮಿಯಾ ಯಂಗಮೆನ್ಸ್ ಅಸೋಸಿಯೇಶನ್, ಬ್ರಹ್ಮಾವರ ಎನ್‌ಎನ್‌ಒ ಘಟಕದ ಸಹಭಾಗಿತ್ವದಲ್ಲಿ ಬ್ರಹ್ಮಾವರದ ಜಾಮಿಯಾ ಮಸೀದಿ ಆವರಣದಲ್ಲಿ ಜರುಗಿದ ಕ್ರಿಕೆಟ್ ಟೂರ್ನಿಯಲ್ಲಿ ಕುಂದಾಪುರದ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಪ್ರಥಮ ಸ್ಥಾನ ಪಡೆಯಿತು.

ಉಡುಪಿ ಜಿಲ್ಲೆಯ 16 ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ಫೈನಲ್ ಪ್ರವೇಶಿಸಿದ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ತಂಡ ಹೊನ್ನಾಳ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿತು. ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ, ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಬ್ರಹ್ಮಾವರ ಎನ್‌ಎನ್‌ಒ ಘಟಕ ಅಧ್ಯಕ್ಷ ತಾಜುದ್ದೀನ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್, ಅಲಫಾಜ್ ಕುಂದಾಪುರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net