

ಗಂಗೊಳ್ಳಿ: ಸಮೃದ್ಧ ಬೈಂದೂರು ಹಾಗೂ ಬೈಂದೂರು ಶಾಸಕರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 80ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ, ಕರಾವಳಿ ಪೊಲೀಸ್ ಠಾಣೆ ಗಂಗೊಳ್ಳಿ, ತ್ರಾಸಿ ಬೀಚ್ ಉತ್ಸವ ತಂಡದ ಸದಸ್ಯರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ವಿಶ್ವ ಪ್ರಸಿದ್ಧ ತ್ರಾಸಿ ಬೀಚ್‌ನಲ್ಲಿ ಭಾನುವಾರ ನಡೆಯಿತು.
ವಾರಕ್ಕೊಮ್ಮೆ ಕಡಲತಡಿಯ ಬೀಚ್‌ನಲ್ಲಿ ನಡೆಯುವ ಸ್ವಚ್ಛತಾ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಪ್ರತಿ ಭಾನುವಾರ ಗಂಗೊಳ್ಳಿ, ಲೈಟ್‌ಹೌಸ್, ಗುಜ್ಜಾಡಿ, ಬೆಣ್ಗೆರೆ, ಕಂಚುಗೋಡು, ತ್ರಾಸಿ, ಮರವಂತೆ, ನಾವುಂದ, ಕಿರಿಮಂಜೇಶ್ವರ, ನಾಗೂರು, ಉಪ್ಪುಂದ, ಬೈಂದೂರು, ಸೋಮೇಶ್ವರ ಬೀಚ್ ಸೇರಿದಂತೆ ಬೈಂದೂರು ಭಾಗದ ಎಲ್ಲ ಕಡಲ ತಡಿಯಲ್ಲಿ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದ ಸಂದರ್ಭ ಸಮಾಜಸೇವಕ, ಆಪದ್ಬಾಂಧವ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ವೆಚ್ಚ ಭರಿಸಲು ವೇಷ ಧರಿಸಿ ಬಂದ ಹಣವನ್ನು ಬಡ ಕುಟುಂಬದವರಿಗೆ ನೀಡಿ ಸಾಂತ್ವನ ನೀಡುತ್ತಿರುವ ಬೆಂಕಿ ಮಣಿ (ಯಾನೆ) ಸಂತು ಅವರನ್ನು ಗೌರವಿಸಲಾಯಿತು.