

ರಾಮದುರ್ಗ ಹಿಂದುಸ್ತಾನದಲ್ಲಿರುವ ಲಿಂಗಾಯತರಿರಲಿ, ಯಾವುದೇ ಜಾತಿಯವರಿರಲಿ ಮೊದಲು ಹಿಂದುಗಳು ಎಂದು ಅರಿತುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ಕೇಸರಿ ಯುವ ಪಡೆ ಆಶ್ರಯದಲ್ಲಿ ಭಾನುವಾರ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಮೂರ್ತಿ ಅನಾವರಣಗೊಳಿಸಿ ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಸಮುದಾಯ ಸೇರಿ 2ಎ ಮೀಸಲಾತಿಯಿಲ್ಲದ ಉಳಿದೆಲ್ಲ ಲಿಂಗಾಯತರಿಗೆ ಶೇ.7ರಷ್ಟು ಮೀಸಲಾತಿ ನೀಡಿ, 2ಸಿ ೂಷಣೆ ಮಾಡಿತ್ತು. ಅದನ್ನು ಸದ್ಯದ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ. ಮೀಸಲಾತಿ ಹೋರಾಟಕ್ಕೆ ಬಸವಜಯ ಮತ್ಯುಂಜಯ ಸ್ವಾಮೀಜಿ ಬದ್ಧರಾಗಿದ್ದು, ನಾವೆಲ್ಲರೂ ಕೆಜೋಡಿಸಬೇಕು ಎಂದರು.
ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನನ್ನ ಮೇಲೆ ಯಾರು ಏನೇ ಆರೋಪ ಮಾಡಲಿ, ಭಕ್ತರ ಪ್ರೀತಿ ಇರುವಾಗ ನಾನು ಎದೆಗುಂದುವುದಿಲ್ಲ. ಭಕ್ತರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಟಕ್ಕೆ ಕೈಜೋಡಿಸಬೇಕು. ಸಮುದಾಯ ಬಲಿ ಕೊಡಲು ಯಾರು ಆಮೀಷಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ದೇಶಕ್ಕೆ ರಾಷ್ಟ್ರಮಾತೆ ಚನ್ನಮ್ಮಾಜಿ ಪರಿಚಯವಾಗದಿರುವುದು ಖೇದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ, ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಹಾದೇವಪ್ಪ ಯಾದವಾಡ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಸಮುದಾಯದ ತಾಲೂಕಾಧ್ಯಕ್ಷ ಸಿ.ಬಿ.ಪಾಟೀಲ ಮಾತನಾಡಿದರು.
ವೀರರಾಣಿ ಚನ್ನಮ್ಮ ಪಂಚಮಸಾಲಿ ೇಮಾಭಿವೃದ್ಧಿ ಸಂಸ್ಥೆ ಅಧ್ಯ ಬಿ.ಎ್.ಬಸಿಡೋಣಿ, ಮುಖಂಡರಾದ ಪಂಚನಗೌಡ ದ್ಯಾಮನಗೌಡ್ರ, ನಿಂಗಪ್ಪ ಪಿರೋಜಿ, ಆರ್.ವಿ.ಅಶೋಕ, ಪರುತಗೌಡ ಪಾಟೀಲ, ಪಿ.ಎ್.ಪಾಟೀಲ, ಬಸನಗೌಡ ದ್ಯಾಮನಗೌಡ್ರ, ಡಾ.ಕೆ.ವಿ.ಪಾಟೀಲ, ಬಾಳಪ್ಪ ಹಂಜಿ, ಧರೆಪ್ಪ ಸಾಂಗ್ಲಿಕರ, ಉಮೇಶ ಕೊಳವಿ, ಗೌಡಪ್ಪಗೌಡ ನಾಡಗೌಡ್ರ, ಸುಭಾಸ ಪಾಟೀಲ, ಮಾರುತಿ ಕೊಪ್ಪದ ಇತರರಿದ್ದರು.
ಕೂಡಲಸಂಗಮ ಪೀಠವೇ ಬೇರೆ, ಟ್ರಸ್ಟ್ ಬೇರೆ. ಟ್ರಸ್ಟ್ ಕೆಲ ಕುಟುಂಬಗಳಿಗೆ ಸೀಮಿತವಾಗಿದೆ. ಜೋಳಿಗೆ ದುಡ್ಡು ತಿಂದವರು ಉದ್ಧಾರವಾಗಿದ್ದು ಇತಿಹಾಸದಲ್ಲಿಲ್ಲ. ಸಿಡಿ ಇವೆ ಎಂದು ಹೇಳುವವರು ತಾಕತ್ತಿದ್ದರೆ ಬಹಿರಂಗ ಮಾಡಲಿ. ಸಮಾಜಕ್ಕೆ ದ್ರೋಹ ಬಗೆದ ಕಾಶಪ್ಪನವರ ಇನ್ನೆರಡೂವರೆ ವರ್ಷದಲ್ಲಿ ಮಾಜಿ ಆಗುವುದು ಖಂಡಿತ.
> ಬಸನಗೌಡ ಪಾಟೀಲ ಯತ್ನಾಳ ಶಾಸಕ