

ವಿಜಯನಗರ: ರಾಜ್ಯದ ನೂತನ ಜಿಲ್ಲೆಗೆ ಜಿಲ್ಲಾಧಿಕಾರಿಯ ನೇಮಕವಾಗಿದ್ದು, ಆ ಮೂಲಕ ಅನಿರುದ್ಧ್ ಶ್ರವಣ್ ಹೊಸ ಜಿಲ್ಲೆಯ ಪ್ರಪ್ರಥಮ ಜಿಲ್ಲಾಧಿಕಾರಿ ಎನಿಸಿಕೊಂಡಿದ್ದಾರೆ.
ಕರ್ನಾಟಕದ 31ನೇ ಜಿಲ್ಲೆಯಾಗಿ ರೂಪುಗೊಂಡಿರುವ ವಿಜಯನಗರ ಜಿಲ್ಲೆಗೆ ಸರ್ಕಾರ ಜಿಲ್ಲಾಧಿಕಾರಿಯನ್ನು ನೇಮಿಸಿದೆ. ಈ ಹಿಂದೆ ವಿಜಯನಗರ ಜಿಲ್ಲೆ ರಚನೆಯ ವಿಶೇಷಾಧಿಕಾರಿಗಳಾಗಿದ್ದ ಅನಿರುದ್ಧ್ ಶ್ರವಣ್, ಇದೀಗ ಅದರ ಪ್ರಪ್ರಥಮ ಜಿಲ್ಲಾಧಿಕಾರಿ ಅನಿಸಿಕೊಂಡಿದ್ದಾರೆ.
ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತರಾಗಿದ್ದರು. ಈಗ ಅವರನ್ನು ವಿಜಯನಗರ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಆದೇಶ ಹೊರಡಿಸಿದ್ದಾರೆ.