ಧಾರವಾಡದ ಇಟ್ಟಿಗಟ್ಟಿ ಬಳಿ ಪಟಾಕಿ ತುಂಬಿದ್ದ ಲಾರಿ ಅಪಘಾತ, ಬೆಚ್ಚಿಬಿದ್ದ ಸ್ಥಳೀಯರು

lorry accident
Published on

ಧಾರವಾಡ: ನಗರದ ಬೈಪಾಸ್‌ನ ಇಟ್ಟಿಗಟ್ಟಿ ಬಳಿ ಪಟಾಕಿ ತುಂಬಿದ್ದ ಲಾರಿ ಹಾಗೂ ಮತ್ತೊಂದು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಕಳೆದ ಸಂಕ್ರಾಂತಿ ಹಬ್ಬದ ಮಾರನೇ ದಿನ ಇದೇ ಸ್ಥಳದಲ್ಲಿ ಭೀಕರ ಅಪಘಾತ ಸಂಭವಿಸಿ 9 ಮಂದಿ ಬಾಲ್ಯ ಸ್ನೇಹಿತೆಯರು ಸೇರಿ 11 ಮಂದಿ ಬಾರದ ಲೋಕಕ್ಕೆ ಹೋಗಿದ್ದರು. ಈ ಕಹಿ ಘಟನೆ ಇನ್ನೂ ಕಾಡುತ್ತಿದ್ದೆ. ಇದೀಗ ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯಿಂದ ಪಟಾಕಿ ಬಾಕ್ಸ್​ಗಳು ಹೊರಬಿದ್ದಿವೆ.

ಪಟಾಕಿ ತುಂಬಿಕೊಂಡು ಶಿವಕಾಶಿಯಿಂದ ಮುಂಬೈಗೆ ಹೊರಟಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪಟಾಕಿ ತುಂಬಿದ್ದ ಲಾರಿ ಅಪಘಾತಕ್ಕೀಡಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದರು. ಒಂದು ವೇಳೆ ಪಟಾಕಿಗೆ ಬೆಂಕಿ ಹೊತ್ತಿಕೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್​ ಪ್ರಾಣಾಪಾಯ ಆಗಲಿಲ್ಲ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಪರಿಶೀಲಿಸಿದರು. ಅಗ್ನಿ ಅವಘಡ ತಡೆ ಸಲಕರಣೆಯಿಲ್ಲದೆ ಪಟಾಕಿ ಸಾಗಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ ಅವರು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net