ವಿದ್ಯಾರ್ಥಿಗಳಿಗೆ ಅಗ್ನಿ ಅನಾಹುತಗಳ ಜಾಗೃತಿ

HUN-FEB-17-4(FIRE DEPT PROGRAMME IN HABBANAKUPPE VILLAGE)
ಹುಣಸೂರು ತಾಲುಕು ಹಬ್ಬನಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಅಗ್ನಿ ಆಕಸ್ಮಿಕಗಳ ಕುರಿತು ಅಗ್ನಿ ಶಾಮಕ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು. ಅಧಿಕಾರಿಗಳಾದ ಮಹದೇವ್, ಸತೀಶ್, ವಿನಯ್‌ಕುಮಾರ್ ಮತ್ತು ವಿದ್ಯಾರ್ಥಿಗಳಿದ್ದರು.
Published on

ಹುಣಸೂರು: ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲೂಕಿನ ಹಬ್ಬನಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ಅಗ್ನಿ ಅನಾಹುತಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಆಕಸ್ಮಿಕ ಬೆಂಕಿಯನ್ನು ನಂದಿಸುವುದು ಹೇಗೆ, ಬೆಂಕಿ ಆಕಸ್ಮಿಕಗಳು ಘಟಿಸುವುದು ಯಾಕೆ, ಬೆಂಕಿಯಿಂದ ಗಾಯಗೊಂಡವರ ಪ್ರಥಮ ಚಿಕಿತ್ಸೆ ಮಾಡುವುದು ಹೇಗೆ ಮುಂತಾದವುಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ನೀಡಲಾಯಿತು.

ಅಗ್ನಿಶಾಮಕ ದಳದ ಠಾಣಾಧಿಕಾರಿ ಎಂ.ಮಹದೇವ್ ಮಾತನಾಡಿ, ತಾಲೂಕಿನಲ್ಲಿ ತಂಬಾಕು ಹದಗೊಳಿಸುವ ಬ್ಯಾರನ್‌ಗಳಿಗೆ ಆಗಾಗ ಅಗ್ಮಿ ಅವಘಡಗಳು ಸಂಭವಿಸುವುದನ್ನು ಕಾಣುತ್ತೇವೆ. ಅಗ್ನಿ ಅವಘಡಗಳಿಗೆ ಜನರಲ್ಲಿರುವ ಅರಿವಿನ ಕೊರತೆಯೇ ಮೂಲ ಕಾರಣವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ತೋರುವ ನಿರಾಸಕ್ತಿಯನ್ನು ತೊರೆಯಬೇಕಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಮೈಸುಟ್ಟುಕೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಮತ್ತು ತಂಬಾಕು ಬ್ಯಾರನ್‌ಗಳಿರುವ ಕಡೆ ವಿದ್ಯಾರ್ಥಿಗಳು ಪರಿಶೀಲಿಸಿ ಗ್ರಾಮೀಣರಿಗೆ ಅರಿವು ಮೂಡಿಸುವ ಕಾರ್ಯ ನಡೆಸಬೇಕೆಂದು ಕೋರಿದರು.

ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಕೆ.ಸಿ.ಸತೀಶ್, ಸಿಬ್ಬಂದಿ ವಿನಯ್‌ಕುಮಾರ್, ಗ್ರಾಮದ ಮುಖಂಡರಾದ ಮಹೇಶ್, ಸ್ವಾಮಿಗೌಡ, ಗಣೇಶ್, ರಾಮಣ್ಣ, ಶಿಕ್ಷಕ ಸತೀಶ್, ಶಿವರುದ್ರಣ್ಣ, ಚಂದ್ರ, ಸತೀಶ್, ನಾಗಣ್ಣ, ಮಹದೇವ್, ಸೋಮಣ್ಣ, ಗೋಪಾಲಗೌಡ, ಜ್ಞಾನಧಾರ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಕಾರ್ತೀಕ್, ಸಹಶಿಬಿರಾಧಿಕಾರಿ ಪದ್ಮ ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net