

ಕಲಬುರಗಿ: ತಾಲೂಕಿನ ಜಾಫರಾಬಾದ್ ಗ್ರಾಮದ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಮೋದಿನ್ ತಂದೆ ಖಾಸಿಂಸಾಬ್ ಅವರ ಮನೆಗೆ ಬೆಂಕಿ ಬಿದ್ದು ಸುಮಾರು 2 ಲಕ್ಷ ರೂ. ಮೌಲ್ಯದ ಸಾಮಾನುಗಳು ನಷ್ಟವಾಗಿರುವ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಶನಿವಾರ ಶಾಸಕ ಅಲ್ಲಂಪ್ರಭು ಪಾಟೀಲ್ ಭೇಟಿ ನೀಡಿ, ಹಾನಿಗೊಳಗಾಗಿರುವ ಕುಟುಂಬದವರಿಗೆ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಸಂಬಂಧಿಸಿದಂತೆ ತಹಸೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಪರಿಹಾರಕ್ಕಾಗಿ ಸೂಚಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈರಣ್ಣ ಡಬಕಿ, ಲಾಡ್ಲೆಸಾಬ ಹರಸೂರ, ಗ್ರಾಮ ಪಂಚಾಯಿತಿ ಸದಸ್ಯರಾದ ತುಲಾಭಾಷಾ ಮುಜೇವಾರ್, ರಫಿಕ್ ಪಟೇಲ್, ಮಲ್ಲು ಇತರರಿದ್ದರು.