ಕೊಳಗಿಬೀಸ್ ನಲ್ಲಿ ಭಾರಿ ಅಗ್ನಿ ದುರಂತ

Fire in factory (1)
Published on

ಶಿರಸಿ: ತಾಲೂಕಿನ ಕೊಳಗಿಬೀಸ್ ನಲ್ಲಿ ಭಾರಿ ಅಗ್ನಿ ದುರಂತ ‌ಸಂಭವಿಸಿದೆ.

ಶಿರಸಿ-ಕುಮಟಾ‌ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮಾನ್ಯ ಪಾಲಿಟೆಕ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ‌ ತಂಡ ಹರಸಾಹಸಪಡುತ್ತಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯೊಳಗಿದ್ದ 22 ಕಾರ್ಮಿಕರು ಸುರಕ್ಷಿತವಾಗಿದ್ದಾರೆ.

ಆದರೆ, ಕಾರ್ಖಾನೆ‌ಯೊಳಗಿದ್ದ ಸಾಮಗ್ರಿಗಳು, ಸಂಪೂರ್ಣ ಸುಟ್ಟಿದೆ. ಬೆಂಕಿ ಪಕ್ಕದ ತೋಟಕ್ಕೆ‌ಹರಡಿದೆ.‌

ರಾಘವ ವಿಶ್ವೇಶ್ವರ ಹೆಗಡೆ ಮಶೀಗದ್ದೆ ಅವರಿಗೆ ಸೇರಿದ ಫ್ಯಾಕ್ಟರಿ ಇದಾಗಿದೆ‌.ಫೈಬರ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net