ಚಲಿಸುವಾಗಲೇ ಕಾರಿನಲ್ಲಿ ಬೆಂಕಿ

IMG-20230311-WA0038
Published on

ಹೊನ್ನಾವರ: ಚಲಿಸುತ್ತಿರುವಾಗಲೇ ಬೆಂಕಿ ಉತ್ಪತ್ತಿಯಾಗಿ ಕಾರು ಸುಟ್ಟು ಕರಕಲಾದ ಘಟನೆ ಪಟ್ಟಣದ ಕುಳಕೋಡ ಸಮೀಪ ಸಾಗರ ರೆಸಿಡೆನ್ಸಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ತಾಲೂಕಿನ ಚಿಕ್ಕೊಳ್ಳಿಯ ಜಗದೀಶ ನಾಯ್ಕ ಎನ್ನುವರ ರೆನಾಲ್ಟ್ ಡಸ್ಟರ್ ಕಾರು ಹೊನ್ನಾವರದಿಂದ ಚಿಕ್ಕೊಳ್ಳಿಗೆ ಸಾಗುವಾಗ ಕುಳಕೋಡ ಬಳಿ ರಾತ್ರಿ 9 ಗಂಟೆ ಸುಮಾರಿಗ ಬೆಂಕಿ ಹೊತ್ತಿಕೊಂಡಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಕಾರಿನೊಳಗಿದ್ದ ಮನೋಜ್ ನಾಯ್ಕ ಕಾರಿನಿಂದ ಇಳಿದಿದ್ದಾರೆ. ನೊಡನೋಡುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಬೆಂಕಿ ದೊಡ್ಡದಾಗಿ ಹೊತ್ತಿಕೊಂಡು ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. 

ಸ್ಥಳಕ್ಕೆ ಅಗ್ನಿಶಾಮಕ ದಳದವರು ಮತ್ತು ಪೊಲೀಸರು ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದರು. ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದ್ದರಿಂದ ಕೆಲವು ಸಮಯ ಟ್ರಾಫಿಕ್ ಜಾಮ್ ಸಂಭವಿಸಿತು. ಬೆಂಗಳೂರು ಬಸ್ಸುಗಳು ಸೇರಿದಂತೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಕೆಲವು ಸಮಯ ಸಮೀಪದ ಬೇರೆ ಮಾರ್ಗವನ್ನು ಅನುಸರಿಸಿ ಸಂಚರಿಸಿದವು.

ಕಾರಿಗೆ ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದು ಆತಂಕಗೊಂಡ ಸ್ಥಳಿಯರು ಹಾಗೂ ವಾಹನ ಸವಾರರು ಸ್ಳಳಕ್ಕೆ ಆಗಮಿಸಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net