

ವಿಜಯವಾಣಿ ಸುದ್ದಿಜಾಲ ಅಂಕೋಲಾ
ಗ್ಯಾಸ್ ಸಿಲೆಂಡರ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಗ್ಯಾಸ್‌ಒಲೆ, ಇನ್ನಿತರ ಪರಿಕರಗಳು ಸುಟ್ಟು ಕರಕಲಾಗಿದ್ದು, ಪಕ್ಕದ ಮನೆಯವರ ಸಮಯಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಘಟನೆ ಪಟ್ಟಣದ ಹೊನ್ನೆಕೇರಿಯಲ್ಲಿ ಭಾನುವಾರ ಸಾಯಂಕಾಲ ನಡೆದಿದೆ.
ಹೊನ್ನೆಕೇರಿಯ ನಿತ್ಯಾನಂದ ಶೆಟ್ಟಿ ಎಂಬರ ಮನೆಯಲ್ಲಿ ಯಾರೂ ಇಲ್ಲದಾಗ ಈ ಅಘವಡ ನಡೆದಿದೆ. ಮನೆಯ ಒಳಗಿನಿಂದ ಹೊಗೆ ಬರುವುದನ್ನು ವಿಕ್ಷಿಸಿದ ಪಕ್ಕದ ನಿವಾಸಿ ಪಿಡಿಓ ಗಿರೀಶ ಎನ್. ನಾಯಕ ಮತ್ತು ಸುನೀಲ ನಾಯ್ಕ ಅವರು ಅಗ್ನಿಶ್ಯಾಮಕ ಠಾಣೆಗೆ ಮಾಹಿತಿ ನೀಡಿದರು. ತಕ್ಷಣ ಅಗ್ನಿಶಾಮಕ ದಳದವರು ಆಗಮಿಸಿ ಮನೆ ಯೊಳಗೆ ಪ್ರವೇಶಿಸಿ ಬೆಂಕಿಯನ್ನು ನಂದಿಸಿ, ಗ್ಯಾಸ್ ಸಿಲೆಂಡರ್ ಸ್ಪೋಟ ಆಗದಂತೆ ನೋಡಿಕೊಂಡು, ದೊಡ್ಡ ಪ್ರಮಾಣದಲ್ಲಿ ಸಂಭವಿಸುವ ಹಾನಿಯನ್ನು ತಪ್ಪಿಸಿದ್ದಾರೆ.
ಅಗ್ನಿಶಾಮಕ ದಳದ ಪ್ರಭಾರ ಅಧಿಕಾರಿ ಗಜಾನನ ವಿ.ನಾಯ್ಕ, ಚಾಲಕ ತಂತ್ರಜ್ಞಾನ ಗಣೇಶ ಯು.ನಾಯ್ಕ, ಅಗ್ನಿಶಾಮಕರಾದ ಗಣೇಶ ಆರ್.ಶೇಟ, ಹರ್ಷ ನಾಯಕ, ಗಣರಾಜ್ ಎಚ್.ನಾಯಕ, ಮಂಜುನಾಥ ನಾಯ್ಕ, ಮಂಗಲದಾಸ ನಾಯ್ಕ ಕರ್ತವ್ಯ ನಿರ್ವಹಿಸಿದರು.