ಕೆಮಿಕಲ್​ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; ಕ್ಷಣಕ್ಷಣಕ್ಕೂ ತೀವ್ರವಾಗುತ್ತಿದೆ ಬೆಂಕಿ

Fire 10
Published on

ಬೆಂಗಳೂರು: ಹಳೇ ಗುಡ್ಡದಹಳ್ಳಿಯ ಬಳಿಯ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಧಗಧಗನೆ ಹೊತ್ತಿ ಉರಿಯುತ್ತಿರುವ ಬೆಂಕಿಯ ತೀವ್ರತೆಗೆ ಸ್ಥಳೀಯರು ಕಂಗಾಲಾಗಿದ್ದಾರೆ.

3 ಅಗ್ನಿಶಾಮಕ ವಾಹನಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರೂ ಕ್ಷಣಕ್ಷಣಕ್ಕೂ ಅಗ್ನಿ ತೀವ್ರತೆ ಹೆಚ್ಚುತ್ತಿದೆ.

ಕಾರ್ಖಾನೆಯ ಬೆಂಕಿ ಪಾರ್ಕಿಂಗ್​ ಸ್ಥಳಕ್ಕೂ ಪಸರಿಸಿದ್ದು, ವಾಹನಗಳಿಗೂ ತಗುಲಿದೆ. ಒಂದು ಗಂಟೆಯಿಂದಲೂ ಸ್ಥಳದಲ್ಲಿ ಕಪ್ಪಾದ ಹೊಗೆಯ ತೀವ್ರತೆ ಹೆಚ್ಚಿದೆ. ಅಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net