80 ಮಾವಿನ ಮರ ಬೆಂಕಿಗಾಹುತಿ

18SGN01
Published on

ಶಿಗ್ಗಾಂವಿ: ಮಾವಿನ ತೋಪಿಗೆ ಆಕಸ್ಮಿಕ ಬೆಂಕಿ ತಗುಲಿ 80 ಮಾವಿನ ಮರಗಳು ಸುಟ್ಟು ಅಪಾರ ಪ್ರಮಾಣದ ಹಾನಿಯಾದ ಘಟನೆ ತಾಲೂಕಿನ ಗೊಟಗೋಡಿ ಗ್ರಾಮದ ಹತ್ತಿರ ಗುರುವಾರ ಸಂಭವಿಸಿದೆ.

ಗ್ರಾಮದ ಶಾಂತಪ್ಪ ಸಿದ್ದಮಲ್ಲಪ್ಪ ಪಟ್ಟಣಶೆಟ್ಟರ ಅವರಿಗೆ ಸೇರಿದ ಜಮೀನನಲ್ಲಿನ 80 ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿದೆ. ಸುಮಾರು 12 ವರ್ಷಗಳಿಂದ ಉತ್ತಮ ಫಸಲು ನೀಡುತ್ತಿದ್ದವು. ಈ ವರ್ಷವೂ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತನಿಗೆ ಬೆಂಕಿ ಅವಘಡ ಆಘಾತವನ್ನುಂಟು ಮಾಡಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net