ಮಸೀದಿ ವಠಾರದಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ

Published on

ಕಾಸರಗೋಡು: ಬದಿಯಡ್ಕ ನೆಲ್ಲಿಕಟ್ಟೆ ಬಳಿಯ ಪೈಕ ಎಂಬಲ್ಲಿ ಮಸೀದಿ ವಠಾರದಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ತಗುಲಿ ಸಂಪೂರ್ಣ ಉರಿದು ನಾಶಗೊಂಡಿದೆ. ಪೈಕ ಜುಮಾ ಮಸೀದಿ ಉಸ್ತಾದ್ ರಾಸಬಾಖಫಿ ಹೈತಮಿ ಎಂಬುವರ ಕಾರು ಬೆಂಕಿಗಾಹುತಿಯಾಗಿದೆ. ಗುರುವಾರ ನಸುಕಿಗೆ ಕಾರು ಉರಿಯುವುದನ್ನು ಕಂಡು ಆಸುಪಾಸಿನ ನಿವಾಸಿಗಳು ನೀಡಿದ ಮಾಹಿತಿಯನ್ವಯ ಕಾಸರಗೋಡು ಅಗ್ನಿಶಾಮಕದಳದ ವಾಹನ ಆಗಮಿಸಿ ಬೆಂಕಿ ನಂದಿಸಿದರೂ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಕಾರಿನಲ್ಲಿ ಉಸ್ತಾದ್ ಅವರ ಪಾಸ್‌ಪೋರ್ಟ್, ಇತರ ದಾಖಲೆ ಇತ್ತೆನ್ನಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net