ಕಸ ವಿಲೇವಾರಿ ಘಟಕಕ್ಕೆ ಬೆಂಕಿ

ಕಸ ವಿಲೇವಾರಿ ಘಟಕಕ್ಕೆ ಬೆಂಕಿ
Published on

ವಿರಾಜಪೇಟೆ: ಪೆರಂಬಾಡಿಯಲ್ಲಿರುವ ವಿರಾಜಪೇಟೆ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.

ಗೋಣಿಕೊಪ್ಪಲು ಅಗ್ನಿಶಾಮಕ ದಳ ಹಾಗೂ ಪುರಸಭೆಯ ನೀರು ಪೂರೈಸುವ ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯಚರಣೆ ಮಾಡಲಾಯಿತು.

ಪುರಸಭೆಯ ಅಭಿಯಂತರ ರೀತ್‌ಸಿಂಗ್, ಆರೋಗ್ಯ ನಿರೀಕ್ಷ ಕೋಮಲ, ಪುರಸಭೆ ಸದಸ್ಯ ಪಟ್ಟಡ ರಂಜಿ ಪೂಣಚ್ಚ, ಆರ್ಜಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಕೆ.ಪ್ರಮೋದ್, ಕಾರ್ಯದರ್ಶಿ ಆರ್.ರಾಜ ಹಾಗೂ ಪುರಸಭೆಯ ಪೌರ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net