

ನಂಜನಗೂಡು: ಕನಕನಗರದ ಬಳಿ ಬೆಂಕಿ ಅವಘಡದಿಂದ ಗುಜರಿ ಪದಾರ್ಥಗಳು ನಾಶವಾಗಿವೆ.
ಶೇಖರಣೆ ಮಾಡಿದ ಹಳೆಯ ಟ್ಯಾಂಕ್‌ಗಳು ಹಾಗೂ ಇತರ ಪದಾರ್ಥಗಳು ಸುಟ್ಟು ಕರಕಲಾಗಿವೆ. ಮೈಸೂರು ಮೂಲದ ವ್ಯಕ್ತಿಯೊಬ್ಬರು ಗುಜರಿ ಸಂಗ್ರಹಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಖಾಲಿ ಜಾಗಕ್ಕೆ ಹೊಂದಿಕೊಂಡಂತೆ ಗ್ಯಾಸ್ ಸಂಗ್ರಹಣೆ ಮಾಡಲಾಗಿದ್ದ ಗೋಡೌನ್ ಕೂಡ ಇದೆ. ತಕ್ಷಣ ನಂಜನಗೂಡಿನ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ವಾಹನ ಬೇರೆಡೆಗೆ ಹೋಗಿದ್ದ ಕಾರಣ ಜುಬಿಲಿಯಂಟ್ ಕಾರ್ಖಾನೆಯ ಬೆಂಕಿ ನಂದಿಸುವ ವಾಹನ ಬಂದು ಬೆಂಕಿ ನಂದಿಸಿತು.