ಬ್ರಹ್ಮಾವರ ತ್ಯಾಜ್ಯ ಘಟಕಕ್ಕೆ ಬೆಂಕಿ

agni
ಸಂತೆ ಮಾರುಕಟ್ಟೆ ಬಳಿಯ ಬೆಂಕಿ ತಗುಲಿದ ತ್ಯಾಜ್ಯ ಸಂಗ್ರಹ ಘಟಕಕ್ಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪರಿಶೀಲಿಸಿದರು.
Published on

ಬ್ರಹ್ಮಾವರ: ಸಂತೆ ಮಾರುಕಟ್ಟೆ ಬಳಿಮೂರು ಗ್ರಾಮ ಪಂಚಾಯತಿಗೆ ಸೇರಿದ ಒಣ ಮತ್ತು ಹಸಿ ತ್ಯಾಜ್ಯ ಸಂಗ್ರಹ ಮತ್ತು ವಿಂಗಡನಾ ಘಟಕಕ್ಕೆ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿದೆ.

ಬೆಂಕಿ ತೀವ್ರತೆಗೆ ವಾಹನಗಳು, ಯಂತ್ರ, ಸಿಸಿ ಕ್ಯಾಮರಾ, ಕಚೇರಿ ದಾಖಲೆಗಳು ಸಂಪೂರ್ಣ ಸುಟ್ಟುಹೋಗಿವೆ. ಬ್ರಹ್ಮಾವರ ಎಸ್‌ಐ ಶಾಂತರಾಜು, ಹೆಡ್ ಕಾನ್‌ಸ್ಟೆಬಲ್ ನಾರಾಯಣ ಗೌಡ, ಗೃಹರಕ್ಷಕ ದಳದ ಸ್ಟೀವನ್ ಪ್ರಕಾಶ್ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದೊಂದಿಗೆ ಬೆಂಕಿ ನಂದಿಸಿದರು. ವೃತ್ತ ನಿರೀಕ್ಷಕ ದಿವಾಕರ ಪಿ., ಕೋಟ ಠಾಣಾಧಿಕಾರಿ ರಾಘವೇಂದ್ರ ಸಿ. ಸ್ಥಳದಲ್ಲಿದ್ದರು.

ಶನಿವಾರ ಬೆಳಗ್ಗೆ ಸ್ಥಳಕ್ಕೆ ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಪೊಲೀಸ್ ವರಿಷ್ಠಾಧಿಕಾರಿ ಪ್ರಭು ಡಿ.ಟಿ, ತಾಪಂ ಕಾರ್ಯನಿರ್ವಣಾಧಿಕಾರಿ ಎಚ್.ವಿ ಇಬ್ರಾಹಿಂಪುರ, ಅಧಿಕಾರಿಗಳಾದ ರಾಜು, ಮಹೇಂದ್ರ ಆಚಾರ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net