ಕೋಟ: ಮಕ್ಕಳು ತಮ್ಮ ಶಿಕ್ಷಣದೊಂದಿಗೆ ಕಲೆ ಸಾಹಿತ್ಯ ಸಂಗೀತ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಬೇಕು. ಅದರಿಂದ ಸಭಾ ಕಂಪನ ದೂರವಾಗುವುದರ ಜತೆಗೆ ಶಿಕ್ಷಣದಲ್ಲಿಯೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಕಲಾಪೀಠ ಸಂಸ್ಥೆ ಕಾರ್ಯದರ್ಶಿ ಕೆ.ನರಸಿಂಹ ತುಂಗ ಹೇಳಿದರು.
ಕಲಾಪೀಠ ಕೋಟ ಸಂಸ್ಥೆ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕೋಟೇಶ್ವರ ಶಾಂತಿಧಾಮ ಪೂರ್ವ ಗುರುಕುಲದಲ್ಲಿ ಯಕ್ಷಗಾನ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಸಂಗೀತ ಶಿಕ್ಷಕ ಸತೀಶ ಭಟ್ಟ ತಾಳ ನುಡಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಅನಂತ ಸ್ಮರಣಿಕೆ ನೀಡಿ ಗೌರವಿಸಿದರು. ಶಾಂತಿಧಾಮ ಪೂರ್ವ ಗುರುಕುಲ ವಿಶ್ವಸ್ಥ ಕೃಷ್ಣರಾಯ ಶಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಮನೋಹರ ಪೈ ಉಪಸ್ಥಿತರಿದ್ದರು.