ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ; ಧಗಧಗಿಸುತ್ತಿರುವ ಮರ-ಗಿಡಗಳು, ಅಗ್ನಿಜ್ವಾಲೆ ನಿಯಂತ್ರಣಕ್ಕೆ ಹರಸಾಹಸ...

Fire
Published on

ಗುಂಡ್ಲುಪೇಟೆ: ಕಳೆದ ಕೆಲವು ದಿನಗಳಿಂದ ಬೆಂಗಳೂರು ಹೊರವಲಯದಲ್ಲಿರುವ ತುರಹಳ್ಳಿ ಕಾಡು ಪದೇಪದೆ ಬೆಂಕಿಗೆ ತುತ್ತಾಗಿ, ಭಾರಿ ನಷ್ಟ ಉಂಟಾಗಿರುವ ಬೆನ್ನಿಗೇ ಇದೀಗ ಬಂಡೀಪುರ ಅರಣ್ಯ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಬಂಡೀಪುರದ ಮದ್ದೂರು ಅರಣ್ಯ ಪ್ರದೇಶದಲ್ಲಿ ಮೂರು ಕಡೆ ಭಾರಿ ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದು, ಅಗ್ನಿಜ್ವಾಲೆ ನಿಯಂತ್ರಣಕ್ಕೆ ಬಾರದೆ ಕಾಡು ಧಗಧಗಿಸಿ ಉರಿಯುತ್ತಿದೆ.

ಕರಡಿಕಲ್ಲು ಗುಡ್ಡದ ಮೂರು ದಿಕ್ಕಿನಲ್ಲಿ ಏಕಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವ್ಯಾಪಿಸದಂತೆ ಕಾರ್ಯಾಚರಣೆ ನಡೆಸಲು ಎಲ್ಲ ವಲಯಗಳ ಸಿಬ್ಬಂದಿ ದೌಡಾಯಿಸಿ ಸತತ ಪ್ರಯತ್ನ ನಡೆಸಿದ್ದಾರೆ‌.

2019ರ ಮಾರ್ಚ್​ ಮೊದಲ ವಾರದಲ್ಲಿ ಬಂಡೀಪುರ ಅಭಯಾರಣದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೊಡ್ಡ ಪ್ರಮಾಣದ ವನ್ಯಸಂಪತ್ತು ಅಗ್ನಿಗಾಹುತಿ ಆಗಿತ್ತು. ಈ ಸಂದರ್ಭದಲ್ಲಿ ಹಲವಾರು ವನ್ಯಜೀವಿಗಳು ಜೀವಂತ ಸುಟ್ಟುಹೋಗಿದ್ದು, ಅಸಂಖ್ಯಾತ ಮರಗಳೂ ಸುಟ್ಟು ಭಸ್ಮವಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net