ಯಲಹಂಕ ವೈಸಿಸಿಪಿಪಿಯಲ್ಲಿ ಅಗ್ನಿ ಅವಘಡ: 15 ಇಂಜಿನಿಯರ್​ಗಳಿಗೆ ಗಾಯ, ಒಬ್ಬರ ಸ್ಥಿತಿ ಚಿಂತಾಜನಕ

YCCPP
Published on

ಬೆಂಗಳೂರು: ಯಲಹಂಕ ಅನಿಲ್ ಆಧಾರಿತ ವಿದ್ಯುತ್ ಸ್ಥಾವರ ( ವೈಸಿಸಿಪಿಪಿ)ದಲ್ಲಿ ಶುಕ್ರವಾರ ನಸುಕಿನ ಜಾವ ಅಗ್ನಿ ಅವಘಡ ಸಂಭವಿಸಿ, 15 ಇಂಜಿನಿಯರ್​ಗಳು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ತಕ್ಷಣವೇ ಸಮೀಪದ ಕೊಲಂಬಿಯಾ ಏಷಿಯಾ, ಮಲ್ಲಿಗೆ ಇನ್ನಿತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಪಿಸಿಎಲ್​ನ 11, ಬಿಎಚ್​ಇಎಲ್ ಹಾಗೂ ಜಿಇ ಕಂಪನಿಯ ತಲಾ ಇಬ್ಬರು ಇಂಜಿನಿಯರ್​ಗಳು ಗಾಯಾಳುಗಳ ಪಟ್ಟಿಯಲ್ಲಿದ್ದಾರೆ.

370 ಮೆಗಾ ವಾಟ್ ಉತ್ಪಾದನಾ ಸಾಮರ್ಥ್ಯದ 1 ಘಟಕವನ್ನು ಕಾರ್ಯಾಚರಣೆಗೆ ಅಣಿಗೊಳಿಸುವ ವೇಳೆ, ಟರ್ಬೈನ್ ಬಳಿ ನಸುಕು 3.30ರ ಸುಮಾರಿಗೆ ಅಗ್ನಿ ಅನಾಹುತ ಘಟಿಸಿದೆ.

ಗಾಯಾಳು ಎಂಜಿನಿಯರ್​ಗಳು

ಮರಿಸ್ವಾಮಿ, ಅಶ್ವತ್ಥ ನಾರಾಯಣ, ಕೆ.ಪಿ.ರವಿ, ಡಿ.ಪಿ.ಶ್ರೀನಿವಾಸ ಮೂರ್ತಿ, ಬಿ.ಶ್ರೀನಿವಾಸ, ಅಕ್ವಲ್ ರಘುರಾಮ್, ಅಶೋಕ್, ಕೃಷ್ಣಭಟ್, ಬಾಲರಾಜ್, ಎಚ್.ಎನ್.ಶ್ರೀನಿವಾಸ, ಮಂಜಪ್ಪ, ನರಸಿಂಹ ಮೂರ್ತಿ, ಹರೀಶ್, ನಿತೀಶ್ ಮತ್ತು ಮನೋಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net