ಯಾದಗಿರಿಯಲ್ಲಿ ವಿದ್ಯುತ್ ಅವಘಡದಿಂದ ಎರಡು ಅಂಗಡಿ ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ಹಾನಿ

Fire Accident
Published on

ಯಾದಗಿರಿ: ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಮೊಬೈಲ್ ಅಂಗಡಿ ಹಾಗೂ ಹಣ್ಣಿನ ಅಂಗಡಿಗೆ ತಡ ರಾತ್ರಿ ಆಕಸ್ಮಿಕ ವಿದ್ಯುತ್ ಅವಘಡದಿಂದಾಗಿ ಬೆಂಕಿಗಾಹುತಿ ಆಗಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಜರುಗಿದೆ.

ಮಂಗಳವಾರ ತಡರಾತ್ರಿ 2ಗೆ ವಿದ್ಯುತ್ ಅವಘಡದಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು ಎರಡು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.

ರಾಮಕೃಷ್ಣ ನಾಗಪ್ಪ ಠಾಕೂರ್ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿಗೆ ಮೊದಲಯ ಬೆಂಕಿ ಕಾಣಿಸಿಕೊಂಡು ನಂತರ ಪಕ್ಕದ‌ ಹಣ್ಣಿನ ಅಂಗಡಿಗು ಬೆಂಕಿ ಕೆನ್ನಾಲಿಗೆ ಚಾಚಿದೆ. ಹೊಸ ಪೋನ್ ಗಳು, ಮತ್ತು ಡಿಸ್ಪ್ಲೇ ಮುಂತಾದ ಮೊಬೈಲ್ ಸಂಬಂಧಿಸಿಸ ಸಾಮಾನುಗಳು ಇದ್ದು ಸುಮಾರು ಅಂದಾಜು 5 ಲಕ್ಷದವರೆಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಣ್ಣಿನ ಅಂಗಡಿ ಮಾಲೀಕ ಸೈಯದ್ ಇನತ್ಯಾಜ್ ಎಂದು ತಿಳಿದುಬಂದಿದ್ದು ಘಟನೆಯಲ್ಲಿ ಅಂದಾಜು ಮೊತ್ತ ಒಂದು ವರೆ ಲಕ್ಷ ಮೌಲ್ಯದ. ಹಣ್ಣು ಮತ್ತು ಅಂಗಡಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಗುರುಮಿಠಕಲ್ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net