ಬ್ಯಾಂಕಲ್ಲಿ ಬೆಂಕಿ, ಹೊತ್ತಿ ಉರಿದ ಕೋಣೆ; ಆರಿಸಲು ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ತದೊತ್ತಡ ತಗ್ಗಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು..

Bank Fire F
Published on

ಕಲಬುರಗಿ: ಬ್ಯಾಂಕ್​ವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಅಲ್ಲಿನ ಕೋಣೆಯೊಂದು ಹೊತ್ತಿ ಉರಿದಿದ್ದು, ಬೆಂಕಿಯನ್ನು ಆರಿಸಲು ಬಂದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ರಕ್ತದೊತ್ತಡ ತಗ್ಗಿ ಅಸ್ವಸ್ಥಗೊಂಡು ಕುಸಿದು ಬಿದ್ದ ಪ್ರಕರಣ ನಡೆದಿದೆ.

ಕಲಬುರಗಿಯ ಸೂಪರ್ ಮಾರ್ಕೆಟ್​​ನಲ್ಲಿರುವ ಕೆನರಾ ಬ್ಯಾಂಕ್​ನಲ್ಲಿ ಈ ಅಗ್ನಿ ಅವಘಡ ನಡೆದಿದೆ. ಬ್ಯಾಂಕ್​ನ ಹಿಂಭಾಗದಲ್ಲಿನ ಕೋಣೆಯಲ್ಲಿದ್ದ ಜನರೇಟರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಸಂಜೆ ಏಳು ಗಂಟೆ ಸುಮಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

ಅಗ್ನಿಶಾಮಕ ದಳದವರು ಬೆಂಕಿ ಆರಿಸಲು ಕಾರ್ಯಾಚರಣೆ ನಡೆಸುತ್ತಿದ್ದಾಗ ಅವರಲ್ಲಿ ಒಬ್ಬ ಸಿಬ್ಬಂದಿಯ ರಕ್ತದೊತ್ತಡ ತಗ್ಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net