ಶಾರ್ಟ್​ ಸಕ್ಯೂರ್ಟ್​ನಿಂದ ಬೆಂಕಿ ಅವಢ

FotoJet
Published on

ಕುದೂರು: ಇಲ್ಲಿನ ಕರ್ನಾಟಕ ಪಬ್ಲಿಕ್​ ಶಾಲೆಯ ಕಚೇರಿಯಲ್ಲಿ ಭಾನುವಾರ ಅಗ್ನಿ ಅವಡ ಸಂಭವಿಸಿದೆ. ಶಾರ್ಟ್​ಸಕ್ಯೂರ್ಟ್​ನಿಂದ ಬೆಂಕಿ ಹತ್ತಿಕೊಂಡು, ಕಚೇರಿಯ ಕಿಟಕಿ, ಫೋಟೋಗಳು, ಟಿವಿ ಮತ್ತು ಟೇಬಲ್​ಗಳು ಸುಟ್ಟಿವೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕುದೂರು ಪೊಲೀಸ್​ ಠಾಣೆಯ ಸಿಬ್ಬಂದಿ ಮಾಗಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಹಾಯದಿಂದ ಬೆಂಕಿ ನಂದಿಸಿದರು. ಇತ್ತೀಚೆಗಷ್ಟೇ ಪಟ್ಟಣದ ಬಸ್​ ನಿಲ್ದಾಣ ಸಮೀಪದ ಉಡುಪಿ ಹೋಟೆಲ್​ನಲ್ಲೂ ಶಾರ್ಟ್​ಸಕ್ಯೂರ್ಟ್​ನಿಂದ ಲಾಂತರ ರೂ. ನಷ್ಟವಾಗಿತ್ತು. ವೇಗವಾಗಿ ಬೆಳೆಯುತ್ತಿರುವ ಕುದೂರು ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net