ನಿಲ್ಲಿಸಿದ್ದ ಕಾರಿಗೆ ಬೆಂಕಿ

Fire Accident
Published on

ಕಾಸರಗೋಡು: ಮುಳ್ಳೇರಿಯ ಸನಿಹ ಕರ್ಮಂತೋಡಿಯಲ್ಲಿ ರಸ್ತೆ ಅಂಚಿಗೆ ನಿಲ್ಲಿಸಿದ್ದ ಕಾರು ಬೆಂಕಿಹತ್ತಿಕೊಂಡು ಉರಿದು ಹಾನಿಗೀಡಾಗಿದೆ. ಕುತ್ತಿಕ್ಕೋಲ್ ಸನಿಹದ ಕೋಳಿಕ್ಕಾಲ್ ನಿವಾಸಿ ಬಿ.ಅಶೋಕ್ ಎಂಬುವರ ಕಾರು ಇದಾಗಿದೆ. ಅಶೋಕ್ ಕುಟುಂಬ ಚೆರ್ಕಳ-ಜಾಲ್ಸೂರ್ ರಸ್ತೆಯ ಕರ್ಮಂತೋಡಿಯ ಸಭಾಂಗಣವೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ರಸ್ತೆ ಅಂಚಿಗೆ ಕಾರು ನಿಲ್ಲಿಸಿ ತೆರಳಿದ್ದ ಸಂದರ್ಭ ಕಾರಿನೊಳಗಿಂದ ಹೊಗೆ ಕಾಣಿಸಿಕೊಂಡಿತ್ತು. ಸ್ಥಳದಲ್ಲಿದ್ದವರು, ಕಾರಿನ ಮಾಲೀಕನನ್ನು ಹುಡುಕಿ ಕರೆತರುವಷ್ಟರಲ್ಲಿ ಬೆಂಕಿ ಕಾರನ್ನು ಆವರಿಸಿತ್ತು. ಕಾರಿನ ಬಾಗಿಲು ಒಡೆದು ಕಾರಿನೊಳಗಿದ್ದ ದಾಖಲೆಪತ್ರಗಳನ್ನು ಹೊರತೆಗೆದಿದ್ದಾರೆ. ಸಮೀಪದ ಕಾವೇರಿ ಚಿತ್ರಮಂದಿರದಲ್ಲಿದ್ದ ಅಗ್ನಿಶಾಮಕ ಉಪಕರಣ ಬಳಸಿ, ನೀರು ಹಾಯಿಸಿ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net