ಟೆಂಪೋ ಚಾಲಕ ಆತ್ಮಹತ್ಯೆ

suicide
Published on

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಮಾಙೌಡ್ ಕಾಯಿಲಂ ವಳಪ್ಪು ನಿವಾಸಿ, ಪಿ.ಪಿ.ವಿಶ್ವನಾಥನ್(46) ಮನೆ ಸಮೀಪದ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೂಡ್ಸ್ ಟೆಂಪೋ ಚಾಲಕರಾಗಿದ್ದರು. ಸೋಮವಾರ ರಾತ್ರಿ ಊಟ ಸೇವಿಸಿ ನಿದ್ರಿಸಲು ತೆರಳಿದ್ದ ಇವರು, ಬೆಳಗ್ಗೆ ನಾಪತ್ತೆಯಾಗಿದ್ದರು. ಹುಡುಕಾಡುವ ಮಧ್ಯೆ ಮೃತದೇಹ ಪತ್ತೆಯಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net