ವಿದ್ಯಾರ್ಥಿ ವೇತನ ದುರುಪಯೋಗ: ನಮೋಶಿ ಭೀಮಳ್ಳಿ ವಿರುದ್ಧ ಎಫ್‌ಐಆರ್

FIR-2
Published on

ಎಚ್‌ಕೆಇ ಹಾಲಿ ಮಾಜಿ ಅಧ್ಯಕ್ಷರಿಗೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎoಸಿ) ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಎಚ್‌ಕೆಇ ಹಾಲಿ ಅಧ್ಯಕ್ಷ ಶಶೀಲ್ ನಮೋಶಿ ಮತ್ತು ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ವಿರುದ್ಧ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
೨೦೦೯-೨೦೧೮ರ ವರೆಗಿನ ಅವಧಿಯಲ್ಲಿ ಇಬ್ಬರು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ವಿದ್ಯಾರ್ಥಿಗಳ ಸ್ಟೆÊÀಂಡ್ ಹಾಗೂ ಸೀಟು ಹಂಚಿಕೆಯಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಎಚ್‌ಕೆಇ ಸಂಸ್ಥೆ ಸದಸ್ಯರಾಗಿರುವ ನ್ಯಾಯವಾದಿ ಪ್ರದೀಪ್ ಸಂಗಪ್ಪ ಎಂAಬುವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
೨೦೦೯ರಿಂದ ೨೦೧೮ರ ಮಾರ್ಚ್ವರೆಗೆ ೬೫.೧೭ ಕೋಟಿ ರೂ. ಹಾಲಿ ಅಧ್ಯಕ್ಷ ಶಶೀಲ್ ನಮೋಶಿ, ಮಾಜಿ ಅಧ್ಯP್ಷÀ ಬಸವರಾಜ ಭೀಮಳ್ಳಿ, ಕಾಲೇಜಿನ ಮಾಜಿ ಡೀನ್‌ಗಳಾದ ಡಾ.ಮಲ್ಲಿಕಾರ್ಜುನ ಬಂಡಾರಿ, ಡಾ.ಸಾಯಿನಾಥ ಆಂದೋಲಾ ಹಾಗೂ ಡಾ.ಶರಣಬಸಪ್ಪ ವಿರುದ್ಧ ಕೇಸ್ ದಾಖಲಿಸಿದ್ದಾರೆ..
ದೂರು ನೀಡಿದ ಅವಧಿಯಲ್ಲಿ ಎಂಆರ್‌ಎAಸಿಯಲ್ಲಿ ಪಿಜಿ ಓದುತ್ತಿದ್ದವರಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಅಲ್ಲದೆ ಕೆಲ ಸೀಟುಗಳನ್ನು ನಿಗದಿತ ವಿದ್ಯಾರ್ಥಿಗಳಿಗೆ ನೀಡದೆ ಹೆಚ್ಚಿನ ಮೊತ್ತ ನೀಡಿದವರಿಗೆ ಪ್ರವೇಶ ನೀಡಲಾಗಿದೆ. ಸಂಸ್ಥೆಯ ಹಣವನ್ನು ಇಬ್ಬರು ಅಧ್ಯಕ್ಷರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net