

ತುಮಕೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ದ ತುಮಕೂರಿನಲ್ಲೂ ಎಫ್ ಐ ಆರ್ ದಾಖಲಾಗಿದೆ.
ಶನಿವಾರ ನಡೆದ ನಾಗರಕಟ್ಟೆ ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಯತ್ನಾಳ್ ವಿರುದ್ಧ ದೂರು ದಾಖಲಿಸಲಾಗಿದೆ.
ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ ಪ್ರಚೋದನಕಾರಿ ಭಾಷಣ ಆರೋಪ ಪೊಲೀಸ್ ಸಿಬ್ಬಂದಿ ರಘುನಾಥ್ ಕೊಟ್ಟ ದೂರು ಆಧಾರಿಸಿ ಎಫ್ ಐ ಆರ್ ದಾಖಲಿಸಲಾಗಿದೆ. "ಮದ್ದೂರಿನಲ್ಲಿ ನನ್ನ ವಿರುದ್ದ 70 ನೇ ಪ್ರಕರಣ ದಾಖಲಾಗಿದೆ. ತುಮಕೂರಿನಲ್ಲಿ 71 ಪ್ರಕರಣ ದಾಖಲಾಗಬಹುದು" ಯತ್ನಾಳ್ ಹೇಳಿದ್ದರು.
ನಗರ ಠಾಣೆಯಲ್ಲಿ ಭಾನುವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ.