

ತುಮಕೂರು: ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಜೀನಿ ಕಂಪನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.
ಶಿರಾ ತಾಲೂಕಿನ ಯರಗುಂಟೆ ಗ್ರಾಮದ ಜೀನಿ ಕಂಪನಿಯಲ್ಲಿ 10 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಮಹಿಳೆಯೋರ್ವರು ತನಗೆ ಕಂಪನಿ ಮಾಲೀಕ ದಿಲೀಪ್ ಕುಮಾರ್ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ.
6 ತಿಂಗಳಿನಿಂದ ಕಿರುಕುಳ: ಕಳೆದ 6 ತಿಂಗಳಿನಿಂದ ಕೆಲಸದ ವೇಳೆ ಕಂಪನಿ ಮಾಲೀಕ ದಿಲೀಪ್ ಕುಮಾರ್ ತನ್ನನ್ನು ಮೈ-ಕೈ ಮುಟ್ಟಿ ಮಾತನಾಡಿಸುವುದಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದರು. ತಾನು ಮದುವೆಯಾಗಿದ್ದು ಈ ರೀತಿ ನಡವಳಿಕೆ ಸರಿಯಲ್ಲ ಎಂದು ಖಂಡಿಸಿರುವುದಾಗಿ ದೂರಿರುವ ಮಹಿಳೆ, ಏ.19 ರಂದು ಯಾರು ಇಲ್ಲದ ಶೆಡ್ನಲ್ಲಿ ನನ್ನ ಎಳೆದಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು ಸಹಕರಿಸಿದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾಗಿ ಗಂಭೀರ ಆರೋಪ ವೆಸಗಿದ್ದಾರೆ.
ಕಳ್ಳಂಬೆಳ್ಳ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ದಿಲೀಪ್ ಕುಮಾರ್ ತಲೆಮರೆಸಿಕೊಂಡಿದ್ದಾರೆ.
ನನ್ನ ತೇಜೋವಧೆಗೆ ಈ ರೀತಿ ಮಹಿಳೆಯ ಕೈಯಲ್ಲಿ ದೂರು ಕೊಡಿಸಲಾಗಿದೆ. ರಾಜಕೀಯ ಪಿತೂರಿ ಹಿನ್ನೆಲೆ ಇಂತಹ ಆರೋಪ ಮಾಡಲಾಗಿದೆ. ಜೀನಿ ಕಂಪನಿಯಲ್ಲಿ 86 ಸಿಸಿ ಟಿವಿಗಳಿದ್ದು 15 ದಿನದ ಡಿವಿಆರ್ ಕೊಡುತ್ತೀನಿ. ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲಿ. ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತೇನೆಂದು ಇಂತಹ ಸುಳ್ಳು ಆರೋಪ ಹೊರಿಸಿದ್ದಾರೆ. ಹಾಗಾಗಿ, ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದು ನಿಶ್ಚಿತ. ದಿಲೀಪ್ ಕುಮಾರ್ ಜೀನಿ ಕಂಪನಿ ಮಾಲೀಕ