ವನ್ಯಜೀವಿಗಳ ಫೊಟೋ ತೆಗೆಯುತ್ತಿದ್ದ ಪ್ರವಾಸಿಗರಿಗೆ ದಂಡ

23-GPT-4
Published on

ಗುಂಡ್ಲುಪೇಟೆ: ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಕೆಳಗಿಳಿದು ವನ್ಯಜೀವಿಗಳ ಫೊಟೋ ತೆಗೆಯುತ್ತಿದ್ದ ಪ್ರವಾಸಿಗರಿಗೆ ಅರಣ್ಯಾಧಿಕಾರಿಗಳು ದಂಡ ವಿಧಿಸಿದ್ದಾರೆ.


ಮಂಗಳವಾರ ಬಂಡೀಪುರ ಮಾರ್ಗವಾಗಿ ಊಟಿಗೆ ತೆರಳುತ್ತಿದ್ದ ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಕೆಕ್ಕನಹಳ್ಳ ಸಮೀಪ ಕಾರು ನಿಲ್ಲಿಸಿ ಕೆಳಗಿಳಿದು ವನ್ಯಜೀವಿಗಳ ಫೋಟೋ ತೆಗೆಯುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿ ನೀಡಿದ ಮಾಹಿತಿ ಹಾಗೂ ಫೊಟೋ ಆಧರಿಸಿ ವಾಹನವನ್ನು ಗುರ್ತಿಸಿದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿದ್ದ ಉಪ ವಲಯಾರಣ್ಯಾಧಿಕಾರಿ ಮುದ್ದುರಾಜ್ ಚಾಲಕನಿಗೆ ಸಾವಿರ ರೂ.ದಂಡ ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net