

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜನರಿಗೆ ಅರಿವು ಮೂಡಿದರಷ್ಟೇ ಶೇ.100 ತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಲಿದ್ದು, ಜನ ಸ್ವಯಂಪ್ರೇರಿತವಾಗಿ ಈ ಕೈಂಕರ್ಯದಲ್ಲಿ ಕೈಜೋಡಿಸದಿದ್ದರೆ ವ್ಯವಸ್ಥೆಯಲ್ಲಿ ಲೋಪ ಖಚಿತವಾಗಿದೆ.
ನಗರದ ಎಚ್ಆರ್ಬಿಆರ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಮಾರ್ಷಲ್ಗಳು ಅವರ ಮಾಮೂಲಿ ಪರಿಶೀಲನೆ ಬಿಟ್ಟು, ಕಸ ಹಾಕುವವರನ್ನು ಕಸದಲ್ಲಿದ್ದ ಪಾರ್ಸೆಲ್ ಕವರ್ನಲ್ಲಿದ್ದ ವಿಳಾಸದ ಮೂಲಕ ಪತ್ತೆಹಚ್ಚಿ ಶಿಸ್ತು ಕಲಿಸುವ ಕೆಲಸದಲ್ಲೂ ತೊಡಗಿದ್ದಾರೆ. ಪಾರ್ಸೆಲ್ ಕವರ್ಗಳಲ್ಲಿ ಬರೆದಿರುವ ವಿಳಾಸವನ್ನು ಸ್ಕಾ$ನ್ ಮಾಡಿ, ತ್ಯಾಜ್ಯ ಎಸೆದ ಮನೆಯವನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಈ ರೀತಿ ದಂಡ ನೀಡಲು ಇಚ್ಛಿಸದವರು, ಮೊದಲಿಗೆ ತ್ಯಾಜ್ಯ ವಿಭಜನೆ ಬಗ್ಗೆ ಕಲಿಯಬೇಕು. ನಿಯಮ ಮೀರುವವರಿಗೆ ದಂಡ ಶತಸಿದ್ಧ.
ಪಾರ್ಸೆಲ್ನಲ್ಲಿ ಲಭಿಸಿದ ವಿಳಾಸವನ್ನು ಹಿಡಿದು ಕಸ ಎಸೆದವರನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಸರಿಯಾದ ಮಾಹಿತಿ ಇಲ್ಲದೇ ಹೋದರೆ, ಬೇರೆಯಾರೂ ಅಮಾಯಕರಿಗೆ ತೊಂದರೆಯಾಗವ ಸಾಧ್ಯತೆ ಇದೆ. ಆದ್ದರಿಂದ ಮಾರ್ಷಲ್ಗಳು ಈ ಕೆಲಸವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸುತ್ತಿದ್ದಾರೆ. ತ್ಯಾಜ್ಯ ಎಸೆದವರು ಸಿಕ್ಕಿದರೆ ಅವರಿಗೆ ಸರಿಯಾಗಿ ಪಾಠ ಮಾಡಲು ಇವರು ಸಮರ್ಥರಿದ್ದಾರೆ.
ಇವರ ಈ ಕಠಿಣ ಪರಿಶ್ರಮದಿಂದ ಸ್ಥಳಿಯ ನಿವಾಸಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಬ್ಲ್ಯಾಕ್ಸ್ಪಾಟ್ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಲೆಕೆಡಿಸಿಕೊಂಡಿದ್ದ ನಾಗರಿಕರು ಈಗ ಸ್ವಲ್ಪ ನೆಮ್ಮದಿಯಿಂದ ಇದ್ದಾರೆ. ಇವರ ಈ ಸೇವೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾನೆ ಲಭಿಸುತ್ತಿದೆ.
ಇತರರಿಗೆ ತಲೆನೋವು!
ದ್ವಿಚಕ್ರ ವಾಹನಗಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಬಂದು ಮನೆಯಿಂದ ಸ್ಡಲ್ಪ ದೂರ ಕಸ ಎಸೆಯುವುದು ಕೆಲವರ ನಿತ್ಯ ಪರಿಪಾಠವಾಗಿದೆ. ಇಂತಹ ಕೆಟ್ಟ ಹವ್ಯಾಸವನ್ನು ಇಟ್ಟುಕೊಂಡವರು, ತಾವು ತಮ್ಮ ವಾತಾವರಣವನ್ನು ಕೆಡಿಸುವುದರ ಜತೆಗೆ ಇತರರಿಗೂ ತಲೆ ನೋವಾಗಿ ಬಿಡುತ್ತಾರೆ. ಇಂತಹ ಮಂದಿಯನ್ನು ಪತ್ತೆಹಚ್ಚುವ ಏಕೈಕ ಮಾರ್ಗವೆಂದರೆ ವಿಳಾಸವನ್ನು ಹಿಂಬಾಲಿಸುವುದು ಮತ್ತು ದಂಡ ವಿಧಿಸುವುದು.