ಅಧ್ಯಾತ್ಮದಿಂದ ಪರಮಾತ್ಮನ ಶೋಧನೆ: ಜಿತಕಾಮಾನಂದ ಜೀ ವಿಶ್ಲೇಷಣೆ

Btw_jithakamananda
Published on

ಬಂಟ್ವಾಳ: ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ ಶುಕ್ರವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಶ್ರೀರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಜೀ ಆಶೀರ್ವಚನ ನೀಡಿ, ನಮ್ಮ ಒಳಗಡೆ ಇರುವ ಪರಮಾತ್ಮನನ್ನು ಅಧ್ಯಾತ್ಮದ ಮೂಲಕ ಹುಡುಕಬೇಕು. ನೆಮ್ಮದಿ ಮನಸಿನ ಅಂತರಾಳದಲ್ಲಿರುವ ಪರಮಾತ್ಮನ ಸ್ಥಿತಿ ಎಂದು ತಿಳಿಸಿದರು.

ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಸಿದರು. ತುಪ್ಪೆಕಲ್ಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪದ್ಮಾವತಿ, ಸೇವಾಕರ್ತೃಗಳಾದ ಅಶೋಕ್ ಶೆಟ್ಟಿ, ಮಮತಾ ಅಶೋಕ್ ಶೆಟ್ಟಿ ದಂಪತಿ ಉಪಸ್ಥಿತರಿದ್ದರು.

ಪ್ರಮುಖರಾದ ರವೀಂದ್ರ ಕಂಬಳಿ, ಪದ್ಮನಾಭ ಶೆಟ್ಟಿ ಪುಂಚಮೆ, ಸುರೇಶ್ ರೈ ಪೆಲಪಾಡಿ, ಪ್ರಕಾಶ್ ಕಿದೆಬೆಟ್ಟು, ಉಮೇಶ್ ಶೆಟ್ಟಿ ಬರ್ಕೆ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಸುಮಿತ್ರ ಸುರೇಶ್, ಜಯಶ್ರೀ ಎಸ್.ಭಂಡಾರಿ, ವೇದಾವತಿ ಜಯಾನಂದ, ಸೌಮ್ಯ ಧನಂಜಯ ಆಚಾರ್ಯ, ಪ್ರಜ್ಞಾ ಪ್ರವೀಣ್, ಗಿರಿಜಾ ರಾಮಚಂದ್ರ, ಪದ್ಮಲತಾ ದಿವಾಕರ್, ಸೌಮ್ಯ ಭಾಸ್ಕರ, ಸುಲೋಚನಾ ಎಸ್.ಶೆಟ್ಟಿ, ಶರ್ಮಿಳಾ ಬಾಲಕೃಷ್ಣ ಶೆಟ್ಟಿ, ಅಮಿತಾ ರಾಜೇಶ್ ಕಲ್ಲತಡಮೆ, ನಳಿನಿ ಕುಟ್ಟಿಕಲ, ಮಮತಾ ಪಿ. ಆಚಾರ್ಯ ಪೆಲಪಾಡಿ ಇದ್ದರು. ಕವಿತಾ ದೇವದಾಸ್ ನಿರೂಪಿಸಿದರು. ವೃಂದಾ ಪೂಜಾರಿ ವಂದಿಸಿದರು. ಪೊಳಲಿ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net